ಮುಪ್ಪು ಇದು ತಪ್ಪಿಗೆ ಬಂದುದು.
ದಪ್ಪ ಪ್ರಾಯ ಚೆಲುವಿನಿಂದಾದುದು.
ಸರ್ಪಗೆ ವಿಷವೆಲ್ಲಿಪ್ಪುದು,
ಉಪ್ಪಲ್ಲಿನ ನಾಳದ ದಾಡೆಯಲ್ಲಿ; ಉಲಿದರೆ ಚಪ್ಪುದು,
ಕಪ್ಪೆಯ ಕೊಂದಡೆ ಕೊಲೆಯದು ತಪ್ಪದು, ತನ್ನಿಂದ ತನಗೆ
ಪರಮಪ್ರಭುವೆ.
Art
Manuscript
Music
Courtesy:
Transliteration
Muppu idu tappige bandudu.
Dappa prāya celuvinindādudu.
Sarpage viṣavellippudu,
uppallina nāḷada dāḍeyalli; ulidare cappudu,
kappeya kondaḍe koleyadu tappadu, tanninda tanage
paramaprabhuve.