Index   ವಚನ - 38    Search  
 
ಕಂಗೆಡುವರೆ ಕಾಲಕಂಸಿ ತಾಳಕ್ಕೆ? ಲಿಂಗಾಂಗಿ ಸ್ಥಿರಕರವಲ್ಲದ ಹಂಗಿಗೆ ಹರಿವರೆ? ಅಂಗವು ಬೆಳ್ಳಿಗಳಪ್ಪುವೆ? ಮುಂಗೋಪಿಗೆ ಮುಕ್ತಿಯಿಲ್ಲ. ಮುರ್ಖತನ ಸಲ್ಲದು. ಗುಂಗಾಡಿನ ಮನೆಯ ಹೊಕ್ಕಂದದಿ, ಡಂಗುರವಾಕ್ಯಗಳು ಎಲ್ಲ ಭಂಗಾಭಂಗಗಳು. ಸಂಗನ ಶರಣರು ಒಪ್ಪರು ಗುಂಗಿಯ ಹುಳು ಭೃಂಗನಹುದೆ ಪರಮಪ್ರಭುವೆ.