Index   ವಚನ - 42    Search  
 
ನಿಲುವಿಡಿದಾತನೆ ಭಕ್ತನು, ನಿಲುವಿಡಿದಾತನೆ ಯುಕ್ತನು. ಮುಕ್ತನು ಮೂರಕ್ಕೆ. ನಿಲುವಿಡಿಯದೆ ಕೋರಿಯಲ್ಲಿ ಸತ್ತರೆ ಹೊಲಗೇರಿಗೆಳೆದು ಬಿಸುಟುವ ಹಳಗದ ತೆರನಂತೆ. ಫಲನಿಪ್ಪಲ ಇದರೊಳಗಿದೆ. ಎಲೊ ಮಾನವ ಎರಗಿ ಬೇಡು ಪರಮಪ್ರಭುವೆ.