Index   ವಚನ - 106    Search  
 
ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ, ಇದಿರಿಗೆ ಬಿನ್ನಾಣವ ತೋರುತ ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ. ಇದಿರು ಕಂಡಲ್ಲಿ ಹಾಕಿ, ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ ಭಂಡನ ಶೀಲ ಮೂರು ಕುಂಡೆಯೊಳಗಾಯಿತ್ತು. ಇದರಂಗವ ಬಿಟ್ಟು, ಮನ ಲಿಂಗದಲ್ಲಿ ನಿಂದು, ಧನ ಜಂಗಮದಲ್ಲಿ ಸಂದು, ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ. ಆತ ಮಂಗಳಮಯ ಮೂರುತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.