Index   ವಚನ - 13    Search  
 
‘ವಿಶಿಷ್ಟಂ ದೀಯತೇ ಜ್ಞಾನಂ ಕ್ಷೀಯತೇ ಪಾಪಸಂಚಯಃ| ಅನಯೋ ಶಾಸನೇ ಸಿದ್ಧಾ ದೀಕ್ಷಾ ಕ್ಷಪಣದಾನಯೋಃ’, ಆ ದೀಕ್ಷೆ ನಿರಾಧಾರದೀಕ್ಷೆಯೆಂದು ಸಾಧಾರ ದೀಕ್ಷೆಯೆಂದು ಎರಡು ಪ್ರಕಾರಮಪ್ಪುದು, ಅವರೊಳು ಶಿವನು ನಿರಧಿಕರಣನಾಗಿ ತೀವ್ರ ಶಕ್ತಿನಿಪಾತದಿಂದ ವಿಜ್ಞಾನಾಕಲರು ಪ್ರಳಯಾಕಲರುಗಳಿಗೆ ಮಾಡುವ ದೀಕ್ಷೆ ನಿರಾಧಾರದೀಕ್ಷೆ ಎನಿಸಿಕೊಂಬುದು. ಗುರುಮೂರ್ತಿಯನಾಶ್ರಯಿಸಿ ಮಂದಶಕ್ತಿನಿಪಾತದತ್ತಣಿಂ ಸಕಲರುಗಳಿಗೆ ಮಾಡೂದು ಸಾಧಾರದೀಕ್ಷೆ ಎನಿಸಿಕೊಂಬುದು. ಇಂತೆಂದು ಪಾರಮೇಶ್ವರ ತಂತ್ರಂ ಪೇಳೂದು, ಶಾಂತವೀರೇಶ್ವರಾ.