Index   ವಚನ - 109    Search  
 
ಮರ್ತ್ಯಕ್ಕೆ ಬಂದ ಭಕ್ತಕಾಯರು ತಮ್ಮ ತಮ್ಮ ಗೊತ್ತಿನಲ್ಲಿಯೆ ಮುಕ್ತರು. ತಮ್ಮ ತಮ್ಮ ನಿಷ್ಠೆಯಲ್ಲಿಯೆ ತೃಪ್ತರು. ಸ್ವಇಚ್ಫಾ ಮರಣ, ಸಂತೋಷಮರಣ, ಕಂಟಕ ಮರಣ,ಖಂಡನೆ ಮರಣ, ದಿಂಡು ಮರಣ, ಅರಿಲಯ ಮರಣ, ಶರೀರ ನಿರವಯ ಮರಣ, ಅಂತರಿಕ್ಷ ಸುಮಾನಲಯ, ಸ್ವಾನುಭಾವಐಕ್ಯ, ಸದ್ಭಾವಕೂಟ, ಪರತಂತ್ರಲಯ, ಸಮ್ಯಗ್‍ಜ್ಞಾನ ಸಂಬಂಧ, ದಿವ್ಯ ಜ್ಞಾನಕೂಟ- ಇಂತೀ ಸರ್ವಸಂಬಂಧ ಕಾಯಬಯಲಹರುಂಟು. ನಾನೊಂದ ಭಾವಿಸಿ ಕಲ್ಪಿಸಿದವನಲ್ಲ. ನಿಮ್ಮ ನಿಮ್ಮ ಭಾವವ ನೀವೆ ನೋಡಿಕೊಳ್ಳಿ. ಎನಗೆ ಕಟ್ಟಾಚಾರದ ನೇಮ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾಡೂ ಎನ್ನ ಕ್ರೀ ತಪ್ಪಿದಲ್ಲಿ ಕಂಡಡೆ ಮಸ್ತಕವನೊಡೆಯ ಹೊಯಿವೆನು.