ಮತ್ತಮಾ ಸ್ವಾಯತದೀಕ್ಷೆಯು
ವೇಧಾದೀಕ್ಷೆ ಮಂತ್ರದೀಕ್ಷೆ ಕ್ರಿಯಾದೀಕ್ಷೆ
ಎಂದು ಮೂರು ಪ್ರಕಾರಮಪ್ಪುದು. ಅವಾವೆಂದೊಡೆ:
ಗುರು ಶಿಷ್ಯನ ಮಸ್ತಕದಲಿ ಆಗಮೋಕ್ತ ವಿಧಾನದಿಂ
ಶಿವಾಸನವನು ಧ್ಯಾನಿಸಿ,
ಅಲ್ಲಲ್ಲಿ ಆವುದಾನೊಂದು
ಶಿವತತ್ವಸಮಾವೇಶವು ವೇಧಾದೀಕ್ಷೆ ಎನಿಸಿಕೊಂಬುದು.
ದೇವತಾದಿಗಳು ಸಹವಾಗಿ ಮಂತ್ರೋಪದೇಶವನು
ಮಾಡುವುದು ಮಂತ್ರದೀಕ್ಷೆ ಎನಿಸಕೊಂಬುದು.
ದೀಕ್ಷೋತ್ತರ ಕ್ರಿಯೆಗೂಡಿ
ಪ್ರಾಣಲಿಂಗೋಪದೇಶವನು ಮಾಡುವುದು
ಕ್ರಿಯಾಧೀಕ್ಷೆ ಎನಿಸಿಕೊಂಬುದು.
ಎಂತೆಂದು[ದು] ವಾತೂಳಂ.
ಮತ್ತಮಾ ಗುರುವು ಶಿಷ್ಯನ ಕರ್ಣದಲ್ಲಿ
ಮಂತ್ರೋಪದೇಶವ ಮಾಡೂದೇ ಮಂತ್ರದೀಕ್ಷೆ.
ಶಿಷ್ಯನ ಹಸ್ತದಲ್ಲಿ ಗುರುವು ಲಿಂಗವ ಕೊಡುವುದೆ
ಕ್ರಿಯಾದೀಕ್ಷೆ.
ಗುರು ತನ್ನ ಹಸ್ತವ ಶಿಷ್ಯನ ಮಸ್ತಕದಲ್ಲಿಡುವುದೆ
ವೇಧಾದೀಕ್ಷೆ ಎನಿಸುವುದ[ಯ್ಯ]
ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
Mattamā svāyatadīkṣeyu
vēdhādīkṣe mantradīkṣe kriyādīkṣe
endu mūru prakāramappudu. Avāvendoḍe:
Guru śiṣyana mastakadali āgamōkta vidhānadiṁ
śivāsanavanu dhyānisi,
allalli āvudānondu
śivatatvasamāvēśavu vēdhādīkṣe enisikombudu.
Dēvatādigaḷu sahavāgi mantrōpadēśavanu
māḍuvudu mantradīkṣe enisakombudu.
Dīkṣōttara kriyegūḍi
prāṇaliṅgōpadēśavanu māḍuvudu
kriyādhīkṣe enisikombudu.
Entendu[du] vātūḷaṁ.
Mattamā guruvu śiṣyana karṇadalli
mantrōpadēśava māḍūdē mantradīkṣe.
Śiṣyana hastadalli guruvu liṅgava koḍuvude
kriyādīkṣe.
Guru tanna hastava śiṣyana mastakadalliḍuvude
vēdhādīkṣe enisuvuda[yya]
śāntavīraprabhuvē.