Index   ವಚನ - 19    Search  
 
ಮತ್ತಂ, ಪರಮಕಾರಣನಾದ ಶಿವನು ಗ್ರಾಹ…..ತಿ ಬ್ರಾಹ್ಮಣಾದಿ ವರ್ಣಾಗಳು ನ್ಯೂನಾಧಿಕವಹತದಿಂದದ್ಧಂಥಾವು. ಅವರವರ ಸಂಸ್ಕಾರವೂ ಆ ಪ್ರಕಾರವೇ ಆಗಬೇಕು. ಅಂತದರಿಂ ಫಲವು ಈ ಪ್ರಕಾರವೇಕಾಗದು? ಇಂತೆಂದು ಕಿರಣಲ್ಲಿ ಚೋದ್ಯಮಂ ಪ್ರಶ್ನೋತ್ತರ ಕ್ರಮದಿಂ ಪರಿಹರಿಸುತ್ತಿದ್ದಾನು. ಸಂಸ್ಕಾರವು ಆತ್ಮಂಗೆ ಅಪ್ಪುದು, ಜಾತಿಗೂ ಇಲ್ಲ ಶರೀರಕ್ಕೂ ಇಲ್ಲ. ಇತ್ತಲಾನು ಜಾತಿಗೆ ಸಂಸ್ಕಾರವಪ್ಪೊಡೆ ಒಬ್ಬನು ದೀಕ್ಷಿತನಾಗಲಾಗಿ ಸರ್ವರೂ ದೀಕ್ಷಿತರಾಗಬೇಕು. ಅಂತದರಿಂ ಜಾತಿಗೆ ಸಂಸ್ಕಾರವಿಲ್ಲ, ಮತ್ತಂ, ಶರೀರವು ಜಡವಹತನದಿಂದವಕ್ಕೆ ಸಂಸ್ಕಾರವಿಲ್ಲ. ಅಂತದರಿಂ ಸರ್ವಾನುಗ್ರಾಹಕನಾದ ಶಿವನು ಚಿದ್ರೂಪರಾದ ಆತ್ಮರುಗಳನ್ನು ಅನುಗ್ರಹಿಸುವನಯ್ಯ ಶಾಂತವೀರೇಶ್ವರಾ