‘ತತ್ರದೌ ಸಂಪ್ರವಕ್ಷ್ಯಾಮಿ ಶೈವ ಸಾಮಾನ್ಯಲಕ್ಷಣಂ’ ಎಂದು
ಆ ನಾಲ್ಕು ವಿಧವಾದ ಶೈವಂಗಳೊಳಗೆ ಮೊದಲು
ಸಾಮಾನ್ಯ ಶೈವಲಕ್ಷಣವ ಹೇಳಿಹೆನು:
‘ಶಿವಲಿಂಗಂ ಯಥಾ ಪಶ್ಯೇತ್ತದಾ ಕುರ್ಯತ್ಸಮರ್ಚನಂ | ಪ್ರದಕ್ಷಿಣಾಂ ಮ
ಪ್ರಣತಿ ದರ್ಶನಂ ವಾsತ್ರ ಕಾರಯೇತ್ || ಭಸ್ಮಧಾರಣಮಾತ್ರೇಣ
ಶುದ್ಧೋಭವತಿ ಸರ್ವದಾ| ಶವಕಿ…. ತದಾರೋಪೆ ಪ್ರೀತಿಮಾನ್ ಶಿವಭಕ್ತಕೇ||
ಏತೇಷಾಂ ನಿಯತಿರ್ನಾಸ್ತಿ ಯಥಾ ಲಬ್ಧಂ ಸಮಾಚರೇತ್’ ಇಂತೆಂದುದಾಗಿ,
ಆವನಾನೊಬ್ಬ ಸಾಮಾನ್ಯ ಶೈವನು
ವಿಭೂತಿಯಪಟ್ಟ ಮಾತ್ರದಿಂದವೆ ಶುದ್ಧವಾಗುತ್ತಿದ್ದಾತನಾಗಿ
ಸ್ವಯಂಭು ಲಿಂಗವನಾದರೆಯೂ
ದೇವದಾನವಮಾನವಾದಿಗಳಿಂ ಪ್ರತಿಷ್ಠಸಲ್ಪಟ್ಟ ಲಿಂಗನಾದರೆಯೂ ಆವ
ವೇಳೆಯಲ್ಲಿ ಕಂಡನು, ಆ ವೇಳೆಯಲ್ಲಿ ಅರ್ಚನೆಯಾನಾದರೂ ಮಾಡೂದು,
ಪ್ರದಕ್ಚಿಣ ದರ್ಶನ ಮನಸ್ಕಾರವನಾದಡೆಯೂ ಮಾಡುವುದು,
ಶಿವಕೀರ್ತಿ ಶಿವನ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನಹನು.
ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯಿತಿಯಿಲ್ಲದೆ ಇದ್ದರೆ
ಯಥಾ ಲಬ್ಧವಾದ ಕ್ರೀಗಳನಾಚರಿಸುವುದು.
ಮತ್ತಂ, ‘ಸಾಮಾನ್ಯಲಕ್ಷಣಂ ಪ್ರೋಕ್ತಂ ವಕ್ಷ್ಯೇ ಮೀಶ್ರಸ್ಯ ಲಕ್ಷಣಂ’-
ಸಾಮಾನ್ಯಶೈವ ಲಕ್ಷಣವು ನಿರೂಪಿಸಲ್ಪಟ್ಟಿತ್ತು.
ಮಿಶ್ರಶೈವ ಲಕ್ಷಣವನು ನಿರೂಪಿಸಿಹೆನು ಕೇಳೆಂದು.
ಶಿವನು ಷಣ್ಮುಖದೇವರಿಗೆ ಉಪದೇಶಿಸುತ್ತಿರ್ದನಯ್ಯ,
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Tatradau sampravakṣyāmi śaiva sāmān'yalakṣaṇaṁ’ endu
ā nālku vidhavāda śaivaṅgaḷoḷage modalu
sāmān'ya śaivalakṣaṇava hēḷihenu:
‘Śivaliṅgaṁ yathā paśyēttadā kuryatsamarcanaṁ | pradakṣiṇāṁ ma
praṇati darśanaṁ vāstra kārayēt || bhasmadhāraṇamātrēṇa
śud'dhōbhavati sarvadā| śavaki…. Tadārōpe prītimān śivabhaktakē||
ētēṣāṁ niyatirnāsti yathā labdhaṁ samācarēt’ intendudāgi,
āvanānobba sāmān'ya śaivanu
vibhūtiyapaṭṭa mātradindave śud'dhavāguttiddātanāgi Svayambhu liṅgavanādareyū
dēvadānavamānavādigaḷiṁ pratiṣṭhasalpaṭṭa liṅganādareyū āva
vēḷeyalli kaṇḍanu, ā vēḷeyalli arcaneyānādarū māḍūdu,
pradakciṇa darśana manaskāravanādaḍeyū māḍuvudu,
śivakīrti śivana vacana śivabhaktaralli prītiyuḷḷātanahanu.
Ī śivārcanādigaḷalli sampūrṇa niyitiyillade iddare
yathā labdhavāda krīgaḷanācarisuvudu.
Mattaṁ, ‘sāmān'yalakṣaṇaṁ prōktaṁ vakṣyē mīśrasya lakṣaṇaṁ’-
sāmān'yaśaiva lakṣaṇavu nirūpisalpaṭṭittu.
Miśraśaiva lakṣaṇavanu nirūpisihenu kēḷendu.
Śivanu ṣaṇmukhadēvarige upadēśisuttirdanayya,
śāntavīrēśvarā