Index   ವಚನ - 48    Search  
 
‘ಏಕ ಏವಾಯಮೇತಸ್ಮಿನ್ ಸರ್ವಸ್ಮಿನ್ ಜಗತೀಶಯಃ | ವಿಶಿಷ್ಟ ಈರ್ಯತೇ ಯಸ್ಮಾದ್ವೀರ ಇತ್ಯಭಿಧೀಯತೇ || ಎಂದು ಆವುದಾನೊಂದು ಕಾರಣದಿಂದ ಆವನಾನೊಬ್ಬನು ಈ ಎಲ್ಲಾ ಜಗತ್ತಿನಲ್ಲಿಯ ವಿಶೇಷಸಲ್ಪಟ್ಟವನೆಂದು ಹೇಳಲ್ಪಡುತ್ತಿಹನು, ಈ ವಿಶೇಷಗುಣವಂತನಪ್ಪ ಆತ ವೀರಶೈವನೆಂದು ಹೇಳಲ್ಪಡುತ್ತಿಹನಯ್ಯಾ ಶಾಂತವೀರೇಶ್ವರಾ