Index   ವಚನ - 55    Search  
 
‘ಗುರುಣಾದತ್ತ ಲಿಂಗಂತು ಶಿವಮಂತ್ರೇಣ ಧಾರಯೇತ್ | ಉತ್ತಮಾ ……..ಕಕ್ಷೌ ವಕ್ಷಸ್ಥಳೇಪಿವಾ||’ ಎಂತೆಂದು ಶ್ರೀಗುರುವಿನಿಂದ ಉಪದೇಶಿಸಲ್ಪಟ್ಟ ಶಿವಲಿಂಗವನು ಶ್ರೀಮತ್ಪಂಚಾಕ್ಷರಿಮಂತ್ರದಿಂದ ಉತ್ತಮಾಂಗದಲ್ಲಿ ಕೊರಳಲ್ಲಿ ಕಕ್ಷೆಯಲ್ಲಿ ಕುಕ್ಷಿಯಲ್ಲಿ ಉರಸ್ಥಲದಲ್ಲಿ ‘ಮೂರ್ದ್ನಿಕಂಠೇ ಭುಜೇ ಹಸ್ತೇಹೃತ್ಸ್ಥಲೇ ನಾಭಿಮಂಡಲೇ | ಏತೇಷಾಮೇಕ ದೇಶೇತು ಧಾರಯೆಚ್ಛಿವಲಿಂಗವಕಂ||’ ಎಂತೆಂದು ಮಸ್ತಕದಲ್ಲಿ ಗಳದಲ್ಲಿ ಭುಜದಲ್ಲಿ ಹಸ್ತ[ದಲ್ಲಿ] ಉರದಲ್ಲಿ ನಾಭಿಮಂಡಲದಲ್ಲಿ ಇವರುಗಳಲ್ಲಿ ಒಂದು ಸ್ಥಾನದಲ್ಲಿ ಆಯಿತ್ತಾದೊಡನೆಯೂ ಶಿವಲಿಂಗವನು ಧರಿಸುವುದಯ್ಯ ಶಾಂತವೀರೇಶ್ವರಾ.