Index   ವಚನ - 59    Search  
 
‘ಶ್ರೇಷಂ ದೀಕ್ಷಾ ಕ್ರಿಯಾಂ ಕೃತ್ವಾ ಮಲತ್ರವಿಮೋಚನಂ | ಗುರು ಶಿಷ್ಯಂ ಸಮಾಲೋಕ್ಯ ತತ್ವದೇಹಂ ವಿಚಿಂತಯೇತ್||’ ಎಂದು ಶಿವಾಚಾರ್ಯನು ಪೇಳಿದ ದೀಕ್ಷಾಸತ್ಕರ್ಮವೆಲ್ಲವನು ಮಾಡಿ, ಮಲತ್ರಯಂಗಳನು ತೊಲಂಗಿಸುವನು, ವೀರಮಾಹೇಶ್ವರ ದೀಕ್ಷಾಪಟದಲ್ಲಿ ಹೇಳಿದ ಹಾಂಗೆ ಆಡಿ, ಶಿಷ್ಯನಂ ಕೃಪಾಲೋಕನದಿಂ ತತ್ವ ದೇಹದ ಹಾಂಗೆ ಚಿಂತಿಸುವುದು ಶಾಂತವೀರೇಶ್ವರಾ.