Index   ವಚನ - 61    Search  
 
‘ಷಟ್ಚಕ್ರಂ ಚ ಷಡಂಗಂ ಷ | ಷಡಧ್ವಾನಂ ಷಡಾನನ || ತತ್ಸ್ಥಾನೇಷು ವಿನ್ಯಸ್ಯೇತ್ಪಂಚಬ್ರಹ್ಮನ್ಯಸ್ಯೇತ್ತತಃ|| ಇಂತೆಂದು, ಎಲೆ ಷಣ್ಮುಖ, ಷಟ್ಚಕ್ರವನು ಷಡಂಗವನು ಷಡಧ್ಯವನು ಆಯಾ ಪೂರ್ವೋಕ್ತನಾದ ಶಿವಾಲಯವಂಗಳಲ್ಲಿ ನ್ಯಾಸವಂ ಮಾಡುವುದು. ಅದರಿಂದ ಮೇಲೆ ಪಂಚಬ್ರಹ್ಮ ಮಂತ್ರಗಳಂ ನ್ಯಾಸವಂ ಮಾಡುವುದು ಶಾಂತವೀರೇಶ್ವರಾ.