Index   ವಚನ - 64    Search  
 
‘ಲಿಂಗೇ ಪ್ರಾಣಂ ಸಮಾಧಾಯ ಪ್ರಾಣೇ ಲಿಂಗಾಂತು ಶಾಂಭವಂ| ಸ್ವಶರೀರಂ ಮನಃ ಕೃತ್ವಾ| ನ ಕಿಂಚ್ಚಿಂತಯೇದ್ಯದಿ||’ ಎಂತೆಂದು ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಶಂಭುಸಂಬಂಧವಾದ ಲಿಂಗವನಿರಿಸಿ, ತನ್ನ ಶರೀರವನು ಮನಸ್ಸನಾಗಿ ಎತ್ತಲಾವೊಂದುಷ್ಟನು ಚಿಂತಿಸಲಾಗದು, ಲಿಂಗಾಂಗಪ್ರಾಣವೊಂದೆ ಎಂದರಿವುದಯ್ಯ ಶಾಂತವೀರೇಶ್ವರಾ.