‘ದೇಹೇ ಪ್ರಾಣಂ ಸಮಾಯೋಜ್ಯ ಪ್ರಾಣಲಿಂಗೇ ಪ್ರಕಲ್ಪಯೇತ್ |
ಅವಿನಾಭಾವ ಸಂಯೋಗಾತ್ತಸ್ಮಾದೈಕ್ಯಂ ಪ್ರಕಲ್ಪಯೇತ್|’ ಎಂದುದಾಗಿ,
ಈ ಪ್ರಕಾರದಿಂದ
ವೀರಶೈವದೀಕ್ಷಿತನಾದ ವೀರಮಾಹೇಶ್ವರನು
ದೇಹಪ್ರಾಣಾಂಗಳ ವರ್ತನೆ ಬೇರಾಗದ ಹಾಂಗೆ,
ಏಕವಾಗಿ ಕೂಡಿ ತನ್ನ ಪ್ರಾಣಲಿಂಗದಲ್ಲಿ ಕಲ್ಪಿಸೂದು.
ಆ ಅಗಲಿಕೆಯಿಂದ, ಭಾವದ ಕೂಟದೆಸೆಯಿಂದ
ಪ್ರಾಣಲಿಂಗವೆಂಬೆಡನೂ ಏಕವನು ಮಾಡುವುದಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
‘Dēhē prāṇaṁ samāyōjya prāṇaliṅgē prakalpayēt |
avinābhāva sanyōgāttasmādaikyaṁ prakalpayēt|’ endudāgi,
ī prakāradinda
vīraśaivadīkṣitanāda vīramāhēśvaranu
dēhaprāṇāṅgaḷa vartane bērāgada hāṅge,
ēkavāgi kūḍi tanna prāṇaliṅgadalli kalpisūdu.
Ā agalikeyinda, bhāvada kūṭadeseyinda
prāṇaliṅgavembeḍanū ēkavanu māḍuvudayya
śāntavīrēśvarā.