‘ಇತಿ ವ್ರತಸಮಾಯುಕ್ತೋ ವೀರಶೈವೋ ವಿಶಿಷ್ಟತೇ’ ಇತ್ಯಾದಿ
ವ್ರತಂಗಳೊಡನೆ ಮಾಡಿದಾತನೆ ವೀರಶೈವವನೆಂದು
ವಿಶೇಷಿಸಲ್ಪಡುತ್ತಿಹನಯ್ಯ.
‘ವಿಶೇಷ ಶೈವಾಮಾಖ್ಯಾತಂ ನಿರಾಭಾರಂ ತತಃ ಶ್ರುಣು’ ಎಂದುದಾಗಿ. ಈ
ಪ್ರಕಾರದಿಂ ವಿಶೇಷ ವೀರಶೈವವೆಂಬ ಭಕ್ತಸ್ಥಲವು ಹೇಳಲ್ಪಟ್ಟಿತ್ತು. ಆನಂತರದಲ್ಲಿ
ನಿರಾಭಾರಿ ವೀರಶೈವವೆಂಬ ಜಂಗಮಸ್ಥಲಮಂ ಕೇಳೆಂದು
ಈಶ್ವರನು ಷಣ್ಮುಖದೇವರಿಗೆ ನಿರೂಪಿಸುತ್ತಿರ್ದನಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
‘Iti vratasamāyuktō vīraśaivō viśiṣṭatē’ ityādi
vrataṅgaḷoḍane māḍidātane vīraśaivavanendu
viśēṣisalpaḍuttihanayya.
‘Viśēṣa śaivāmākhyātaṁ nirābhāraṁ tataḥ śruṇu’ endudāgi. Ī
prakāradiṁ viśēṣa vīraśaivavemba bhaktasthalavu hēḷalpaṭṭittu. Ānantaradalli
nirābhāri vīraśaivavemba jaṅgamasthalamaṁ kēḷendu
īśvaranu ṣaṇmukhadēvarige nirūpisuttirdanayya
śāntavīrēśvarā.