Index   ವಚನ - 67    Search  
 
‘ಸರ್ವಸಂಸಾರಸೌಖ್ಯಾನಿತ್ಯತ್ತ್ವಾ ಚಿತ್ತಂ ಲಯೇತ್ | ದಂಡ ಕೌಪೀನ ಕಾಷಾಯಂ ಜಟಾವಲ್ಕಲಧಾರಕ’|| ಎಂದುದಾಗಿ, ಆವನಾನೊಬ್ಬ ನಿರಾಭಾರಿ ವೀರಶೈವನು ಸಮಸ್ತ ಸಂಸಾರಸುಖಂಗಳಂ ಬಿಟ್ಟು, ದಂಡ ಕೌಪೀನ ಕಾಷಾಂಬರ ಜಟಾಬಂಧ ನಾರಸೀರೆಗಳಂ ಧರಿಸುತ್ತ, ಸಂಸಾರವ್ಯಾಪರ ನಿರ್ಮುಕ್ತವಾದ ಚಿತ್ತಮಂ ಶಿವಲಿಂಗದಲ್ಲಿ ಲಯವನೆಯ್ದಿಸುವದಯ್ಯಾ ಶಾಂತವೀರೇಶ್ವರಾ.