Index   ವಚನ - 69    Search  
 
‘ನಿರಾಭಾರೀತಿ ವಿಜ್ಞೇಯಃ ಸ ಏವ ಪರಮಶಿವಃ| ವೀರಶೈವಕ್ರಮಃ ಪ್ರೋಕ್ತ ಪ್ರಾಯಶ್ಚಿತ್ತವಿವರ್ಜಿತಃ|| ಎಂದು, ಇವು ಮೊದಲಾದ ಜಂಗಮಸ್ಥಲ ಪ್ರವರ್ತನೆತಯುಳ್ಳಾತನು ನಿರಾಭಾರಿ ವೀರಶೈವನೆಂದರಿಯಲ್ತಕ್ಕದು, ಆ ನಿರಾಭಾರಿ ವೀರಶೈವನೆ ಉತ್ಕೃಷ್ಟವಾದ ಶಿವನು ತಾನೆ. ಈ ಪ್ರಕಾರದಿಂದ ನಿರೂಪಿಸಲ್ಪಟ್ಟ ವೀರಶೈವಕ್ರಮವು ಪ್ರಾಯಶ್ಚಿತ್ತವಿಲ್ಲದೆ ಇದ್ದಂಥದು ಎಂದು ಅರಿಯಲ್ತಕ್ಕುದಯ್ಯ ಶಾಂತವೀರೇಶ್ವರಾ.