Index   ವಚನ - 72    Search  
 
ಬಳಿಕ ವಾಹನ ಮಂಚ ತಲೆಸುತ್ತು ಕುಪ್ಪಸ ದಿಗಂಬರ ಮಕ್ತೇಶ ಅಶುಚಿತ್ವ ಬಹುಭಾಷಿ ಆಗುಳಿಗೆ ಸೀನು ತೂಕಡಿಗೆ ನಿಷ್ಟವನ ನೀಚಪ್ರಾಣಿದರ್ಶನ ಕ್ರೋಧ ವ್ಯಾಕುಲತೆಗಳುಳ್ಳಾತನಾಗಿ ಜಪಿಸಲಾಗದೆಂದು, ನಿರ್ವಿಕಾರತ್ವದಿಂ ಕಾಷ್ಟಮೌನಿಯಾಗಿ, ಸಮಗ್ರೀವ ಶಿರಃಶರೀರಯಾಗಿ, ಮನೋದೃಷ್ಟಿಗಳೇಕಾಗ್ರತೆಯಂ ಧ್ಯಾನ ಮುದ್ರಾಸಮನ್ವಿತನಾಗಿ ಕುಳ್ಳಿರ್ದು, ಬಳಿಕ ಭಸಿತ ರುದ್ರಾಕ್ಷಾಭರಣ ಗುರುಪಾದ ಸ್ಮರಣ ಪೂರ್ವಕಮಾಗಿ, ಮರಳಿ ಕನಿಷ್ಟ ಅನಾಮಿಕೆ ಅಂಗುಷ್ಠ. ಮೆಂಬಂಗುಲಿತ್ರಯದಿಂ ವಾಮದಕ್ಷಿಣ ನಾಸಾಪುಟಮಂ ಪಡಿದು, ಮೇಲೆ ಬ್ರಹ್ಮಾಧಿದೇವತೆಯಪ್ಪ ಪ್ರಣವಾದಿಯಾದ ಆಕಾರ ಮಂತ್ರಮಂ ಚಿಂತಿಸುತ್ತೆ, ಈಡೆಯೊಳ್ಪವನನಂ ತನ್ನ ಶಕ್ತಾನುಸಾರದಿಂದುರದಲ್ಲಿ ಪೂರಿಸಿ, ಬಳಿಕೆ ವಿಷ್ಣುವಧಿದೇವತೆಯಾದ ಪ್ರಣವ ಮಧ್ಯದಲ್ಲಿಪ್ಪ ಉಕಾರಮಂ ಧ್ಯಾನಿಸುತ್ತಾ ಪೂರಿಸುತ್ತಾ ಪೂರಿಸಿದ ಪ್ರಾಣನನಲ್ಲಿಯೆ ಕುಂಭಿಸಿ, ಬಳಿಕ ರುದ್ರದಿದೇವತ್ಮಾಕ್ರಮದ ಪ್ರಣವದಂತ್ಯಮಪ್ಪ ಮಕಾರಮಂ ಸ್ಮರಿಸುತ್ತ, ಕುಂಭಿಸಿದ ವಾಯುಮಂ ಮೆಲ್ಲನೆ ಪಿಂಗಲೆಯಿಂ ರೇಚಿಸಿ, ಒಮ್ಮೆಲೆಯಾ ಮಂತ್ರಕ್ರಮವಿಡಿದು, ಮತ್ತೆ ಪಿಂಗಲೆಯಿಂ ಪೂರಿಸುತ್ತದರದಲ್ಲಿ ಕುಂಭಿಸುತೀಡೇಯಿಂ ರೇಚಿಸುತ್ತಿಂತು ಪ್ರಾಣಾಯಾಮಕ್ರಮಂ ಮಾಡುವುದಯ್ಯ ಶಾಂತವೀರೇಶ್ವರಾ.