Index   ವಚನ - 71    Search  
 
ಬಳಿಕ, ವಂಶಾಸನದಿಂ ದರದ್ರ, ಪಾಷಾಣಾಸದಿಂ ವ್ಯಾದಿ ಭೂಮ್ಯಾಸನದಿಂ ದುಃಖ ಮಂತ್ರಹಾನಿಗಳು, ದಾರುಕಾಸನದಿಂ ದುರ್ಭಾಗ್ಯ ವ್ಯಾಧಿಗಳು. ತೃಣಾಸನದಿಂ ಯಶೋಹಾನಿ, ಪಲ್ಲವಾಸನದಿಂ ಚಿತ್ತಭ್ರಾಂತಿ, ಕೃಷ್ಣಜಿನಾಸನದಿಂ ಜ್ಞಾನಸಿದ್ಧಿ, ವ್ಯಾಘ್ರಾ ಜಿನಾಚರ್ಮಾಸನದಿಂ ಮೋಕ್ಷಲಕ್ಷ್ಮಿ, ವಸ್ತ್ರಾಸದಿಂದ ವ್ಯಾಧಿ ನಿವೃತ್ತಿ, ಕಂಬಲಾಸನದಿಂ ಸುಖ್ಯತೆ, ಕೃಷ್ಣವಸ್ತ್ರಾಸನದಿಂ ಅಭಿಚಾರ ಕ್ರಿಯೆಗೆ, ರಕ್ತ ವಸ್ತ್ರಾಸನವೆ ವಶ್ಯಾದಿ ಕ್ರಿಯೇಗೆ, ಶುಭ್ರವಸ್ತ್ರಾಸನವೆ ಶಾಂತ್ಯಧಿವಿಧಿಗೆ, ಚಿತ್ರ ಕಂಬಲಾಸನವೆ ಸರ್ವಾರ್ಥಸಿದ್ಧಿಗಳಿವೆಂದು ಪೀಠಗಳಂ ಕುರುಹಿಟ್ಟು, ಬಳಿಕೆಂಬತ್ತನಾಲ್ಕಾಸನಂಗಳೊಳಗೆ ಸಿದ್ಧಾಸನ ಪದ್ಮಾಸನ ಸ್ವಸ್ತಿಕಾಸನ ವೀರಾಸನ ಗೋಮುಖಾಸನ ಸುಖಾಸನಂಗಳೇ ಜಪಕರ್ಮಕ್ಕೆ ಯೋಗ್ಯಮಾದಾಸನಂಗಳೆಂದು ಸುಸ್ಥಿರನಾಗಿ ಕುಳ್ಳಿರುವುದಯ್ಯ ಶಾಂತವೀರೇಶ್ವರಾ.