Index   ವಚನ - 75    Search  
 
ಬಳಿಕಾ ಮಂತ್ರಗಳು ವಾಚ್ಯ ವಾಚಕ ಸಂಬಂಧವರಿದು, ಮೇಲೆ ಪಂಚಬ್ರಹ್ಮ ಷಡಂಗಂಗಳೆ ಪ್ರಥಮಾವರಣ, ಅನಂತದ್ಯಷ್ಟ ವಿದ್ಯೇಶ್ವರರಡನೆಯಾವರಣ, ಉಮೆ ಚಂಡೀಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣಪತಿ ವೃಷಭ ಷಣ್ಮುಖರೆಂಬ ಅಷ್ಟಗಣೇಶ್ವರರೆ ಮೂರನೆಯಾವರಣ, ಇಂದ್ರಾದಿ ಲೋಕಪಾಲಾಷ್ಟಕರು ಬ್ರಹ್ಮವಿಷ್ಣುಗಳು ನಾಲ್ಕನೆಯಾವರಣ, ವಜ್ರಾದಿದ್ವಚಕ್ರಂಗಳೆಂಬ ದಶಾಯುಧಂಗಳೈದನೆಯಾವರಣ[….] ಏಕಾದಶರುದ್ರರೆಂಟನೆಯಾವರಣ, ಆದಿತ್ಯಾದಿ ನವಗ್ರಹಂಗಳೊಂಬತ್ತನೆಯಾವರಣವಹುದಾಗಿ, ಪಂಚಾಕ್ಷರಾದಿ ಮಂತ್ರಾಧಿದೇವತೆಯನಾವರಣಸಹಿತಮಾಗಾದರೂ, ನಿರಾವರಣಮಾಗಾದರೂ ಧ್ಯಾನಿಸುತ್ತೆ ಜಪಿಸೂದು. ಧ್ಯಾನದಲ್ಲಿ ಅಭಿಚಾರ ಗ್ರಹೋಚ್ಚಾಟನಾದಿಗಳಿಗೆ ಕೃಷ್ಣವರ್ಣರೂಪದಿಂ, ಮುಕ್ತ್ಯಾದಿಗಳಿಗೆ ಶುಕ್ರವರ್ಣರೂಪದಿಂ ಧ್ಯಾನಿಸೂದಯ್ಯ ಶಾಂತವೀರೇಶ್ವರಾ.