Index   ವಚನ - 85    Search  
 
ಬಳಿಕಾ ವೀರಶೈವನೆ ಕ್ರಿಯಾಭೇದದಿಂ ಸಾಮಾನ್ಯ ವೀರಶೈವನೆಂದು, ವಿಶೇಷ ವೀರಶೈವನೆಂದು ನಿರಾಭಾರಿವೀರಶೈವನೆಂದು ತ್ರಿವಿಧಮಾಗಿರ್ಪನವರಲ್ಲಿ ಶ್ರೀಗುರುವಿನ ಹಸ್ತಮಸ್ತಕಸಂಯೋಗದಿಂ ವಿಭೂತಿಯಪಟ್ಟದಿಂ ಶಿವಮಂತ್ರೋಪದೇಶದಿಂ ಲಿಂಗಾಂಗಸಂಗಿಯಾಗಿ, ಹಸ್ತಮಸ್ತಕ ಕಂಠ ಕಕ್ಷ ವಕ್ಷಸ್ಥಲಾದಿಗಳಲ್ಲಿ ಶಿವಲಿಂಗಧಾರಕನಾಗಿ ಏಕಕಾಲಮಾದೊಡಂ ತ್ರಿಕಾಲಮಾದೊಡಂ ಲಿಂಗಾರ್ಚನಾಸಕ್ತನಾಗಿ, ಗುರುಲಿಂಗಭಸಿತಂಗಳಲ್ಲಿ ಭಕ್ತಿಯುಕ್ತನಾಗಿಪ್ಪಾತನೆ ಸಾಮಾನ್ಯ ವೀರಶೈವನಪ್ಪನಯ್ಯ ಶಾಂತವೀರೇಶ್ವರಾ.