Index   ವಚನ - 84    Search  
 
ಜಾತಿಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ರಜಃಸೂತಕವೆಂಬ ಪಂಚಸೂತಕವನತಿಗಳೆದಾತನಾಗಿ, ಲಿಂಗಾಚಾರ ಸದಾಚಾರ ಭಕ್ತ್ಯಚಾರ ಶಿವಾಚಾರ ಗಣಾಚಾರವೆಂಬ ಪಂಚಾಚಾರನಿಷ್ಠನಾಗಿ, ದಾಸತ್ವ ವೀರದಾಸತ್ವ ಭೃತ್ಯತ್ಬ ವೀರಭೃತ್ಯ[ತ್ವ] ಸಮಯಾಚಾರತ್ವ ಸಕಲಾವಸ್ಥಾತ್ವಂಗಳೆಂಬ ಷಡ್ಚಿಧ ಸಜ್ಜನತ್ವಯುಕ್ತನಾಗಿ, ದೇಶ ಕಾಲ ಕಲ್ಪತಾದಿ ಲೌಕಿಕಾಚಾರಂಗಳಂ ಮೀರಿ ಸ್ವತಂತ್ರಶೀಲನಾಗಿ, ಶಿವಾತ್ಮರ್ಗೆ ಭೇದಭ್ರಾಂತಿದೋರದಾತನಾಗಿ, ಉಪನಿಷದ್ವಾಕ್ಯ ಜನಿತ ವಿದ್ಯೆಯಲ್ಲಿ ರಮಿಸುವ ಶಿವನಪ್ಪುದರಿಂ ತತ್ಸಂಜ್ಞೆಯುಳ್ಳಾತನಾಗಿ, ಜಗತ್ಪೂಜ್ಯನಾಗಿಪ್ಪಾತನೆ ವೀರಶೈವನಪ್ಪನಯ್ಯಾ ಶಾಂತವೀರೇಶ್ವರಾ.