…..ತಮಾದ ತ್ರಿವಿಧ ಕುಂಭದೊಳೊಂದೊಂದು ರಾತ್ರೆಯಲ್ಲಿ
ಪ್ರತ್ಯೇಕಮಾಗಷ್ಟೋತ್ತರಶತ
ಪಂಚಾಕ್ಷರಮನುವಿಂದಭಿಮಂತ್ರಿಸುತ್ತವಗಾಹಮಿರಿಸಿ,
ಬಳಿಕಾ ನಾಲ್ಕನೆಯ ರಾತ್ರೆಯೊಳಾ ಪಂಚಕಳಶ ಸ್ಥಾಪನಕ್ಕೆ
ಉತ್ತರದಿಕ್ಕಿನಲ್ಲಿ ಭುಮಿಯಂ ಪರಿಶುದ್ಧಿಗೆಯ್ದಷ್ಟಪದ್ಮಮಂ ತುಂಬಿ,
ಬಳಿಕ ಏಳು ಮೊಳದುದ್ದದೊಂದು ನವೀನ ವಸ್ತ್ರಮಂ ತಂದಾ
ಪದ್ಮದ ಮೇಲೊಂದು ಮೊಳದುದ್ದಮಂ ಮುಚ್ಚುತ್ತದರ ಮೇಲೊಂದಂಗುಲದ
ದಟ್ಟದಲ್ಲಿ ಶ್ಯಾಮಮಂ ಪಸರಿಸುತ್ತಷ್ಟದಳನಳಿನಮಂ ಬರೆದು ವಸ್ತ್ರಮಂ
ಭಾಷಣಿಸಿ,
ಮತ್ತದರ ಮೇಲೆ ತಿಲಮಂ ಹರಹುತ್ತಷ್ಟದಳ ಕಮಲಮಂ
ಲಿಖಿಸುತ್ತಾ ವಸ್ತ್ರಮಂ ಪೊದಿಸಿ,
ಮತ್ತದರ ಮೇಲೆ ಗೋದವೆಯಂ ಹರಹುತ್ತಷ್ಟದಳಕಮಲಮಂ ನಿರ್ಮಿಸುತ್ತಾ
ವಸ್ತ್ರಮಂ ಕವಿಚಿ,
ಮತ್ತದರ ಮೇಲೆ ವ್ರೀಹಿಯಂ ಪಸರಿಸುತ್ತಷ್ಟದಳಕಂಜಮಂ ರಚಿಸುತ್ತಾ
ವಸ್ತ್ರಮಂ ಮುಸುಂಕಿ,
ಮತ್ತದರ ಮೇಲೆ ತಂಡುಲಮಂ ಹರಹುತ್ತಷ್ಟದಳ ಕಂಜಮನಂಕಿಸುತ್ತಾ
ವಸ್ತ್ರಮನಾವರಿಸಿ, ಮತ್ತದರ ಮೇಲೆ ಚೂತ ಬಿಲ್ವ ಆಮಳಕ ಕುಶ
ಅಪಾಮಾರ್ಗವೆಂಬ ಪಂಚಪತ್ರಗಳಂ ವಿಸ್ತರಿಸುತ್ತಾ ವಸ್ತ್ರಮನಾಚ್ಛಾದಿಸಿ,
ಹಿಂಗೇಳು ನೆಲೆಯಾದಾಧಾರಮಂ ಕಲ್ಪಿಸುತ್ತದರ ಮೇಲೆ
ಆ ಲಿಂಗಸ್ಥಲಕ್ಕೆ ಮಾತೃಕಾನ್ಯಾಸ ಕಲಾನ್ಯಾಸ ಮಂತ್ರನ್ಯಾಸಾದಿಗಳಿಂ
ಪ್ರಾಣ ಪ್ರತಿಷ್ಠೆಯಂ ಮಾಡಿ, ಕರಳಿ ಕಳಶೋದಕದಿಂ
ಸ್ನಾನಂಗೆಯ್ದಷ್ಟ ವಿಧಾರ್ಚನೆಯಂ ಮಾಡಿಂತು ಮುನ್ನವೆ
ಪರಿಶಿ……. ವಡೆದಿರ್ದ ಲಿಂಗಸ್ಥಲವನಾಚಾರ್ಯಂ ತನ್ನ ವಾಮಕರಸ್ಥಲಕ್ಕೆ
ಬಿಜಯಂಗೆಯ್ಸಿಕೊಂಡು, ಬಳಿಕ್ಕದರೊಳಾಪೂರ್ವೋಕ್ತಕ್ರಮದಿಂ
ದೃಷ್ಟಿಸ್ಥಿತ ಶಿವಕಲಾ ಪ್ರತಿಷ್ಠೆಯಂ ಮಾಡಿ, ಮತ್ತಾ ಶಿಷ್ಯನ “ಅಯಂ
ಮೇ ಹಸ್ತೋ ಭಗವಾನೆಂಬ” ಶ್ರುತಿಸಿದ್ಧಮಾದ ವಾಮಹಸ್ತಪೀಠದೊಳಾ
ಶಿವಲಿಂಗಮಂ ಗೋಮುಖಭಾಗವಪ್ಪಂತೆ ಸಂಸ್ಥಾಪಿಸೂದೆ
ಕ್ರಿಯಾದೀಕ್ಷೆ ಎನಿಸೂದಯ್ಯಾ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
…..Tamāda trividha kumbhadoḷondondu rātreyalli
pratyēkamāgaṣṭōttaraśata
pan̄cākṣaramanuvindabhimantrisuttavagāhamirisi,
baḷikā nālkaneya rātreyoḷā pan̄cakaḷaśa sthāpanakke
uttaradikkinalli bhumiyaṁ pariśud'dhigeydaṣṭapadmamaṁ tumbi,
baḷika ēḷu moḷaduddadondu navīna vastramaṁ tandā
padmada mēlondu moḷaduddamaṁ muccuttadara mēlondaṅgulada
daṭṭadalli śyāmamaṁ pasarisuttaṣṭadaḷanaḷinamaṁ baredu vastramaṁ
bhāṣaṇisi,
Mattadara mēle tilamaṁ harahuttaṣṭadaḷa kamalamaṁ
likhisuttā vastramaṁ podisi,
mattadara mēle gōdaveyaṁ harahuttaṣṭadaḷakamalamaṁ nirmisuttā
vastramaṁ kavici,
mattadara mēle vrīhiyaṁ pasarisuttaṣṭadaḷakan̄jamaṁ racisuttā
vastramaṁ musuṅki,
mattadara mēle taṇḍulamaṁ harahuttaṣṭadaḷa kan̄jamanaṅkisuttā
vastramanāvarisi, mattadara mēle cūta bilva āmaḷaka kuśa
apāmārgavemba pan̄capatragaḷaṁ vistarisuttā vastramanācchādisi,
hiṅgēḷu neleyādādhāramaṁ kalpisuttadara mēle
Ā liṅgasthalakke mātr̥kān'yāsa kalān'yāsa mantran'yāsādigaḷiṁ
prāṇa pratiṣṭheyaṁ māḍi, karaḷi kaḷaśōdakadiṁ
snānaṅgeydaṣṭa vidhārcaneyaṁ māḍintu munnave
pariśi……. Vaḍedirda liṅgasthalavanācāryaṁ tanna vāmakarasthalakke
bijayaṅgeysikoṇḍu, baḷikkadaroḷāpūrvōktakramadiṁ
dr̥ṣṭisthita śivakalā pratiṣṭheyaṁ māḍi, mattā śiṣyana “ayaṁ
mē hastō bhagavānemba” śrutisid'dhamāda vāmahastapīṭhadoḷā
śivaliṅgamaṁ gōmukhabhāgavappante sansthāpisūde
kriyādīkṣe enisūdayyā
śāntavīrēśvarā.