Index   ವಚನ - 88    Search  
 
ಬಳಿಕಾ ಕ್ರಿ……..ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದನಿನ್ನು ನಿಮಿಶಾರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ ……… ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದಲಾದ ಶಿವಕ್ರಿಯೆಗಳನುಪದೇಶಂಗೆಯ್ದಂತು ಪೇಳ್ದ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಭಿಷೇಕ, ವಿಭೂತಿಯಪಟ್ಟ, ಲಿಂಗಾಯತ, ಲಿಂಗಾಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೂದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶ್ಯಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳರಿಸಿ ಮಂತ್ರನ್ಯಾಸದಿಗಳಿಂ ಮಾಡಿ ಮಂತ್ರಶರೀರ ಎನಿಸೂದೆ ಸ್ವಸ್ತಿಕಾರೋಹಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಭಿಷೇಕವೆನಿಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೂದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗಸಂಬಂಧಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ: ಶ್ರೇಷ್ಠರುಗಳಾವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ………..[ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು….. ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲವನೊ……. ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲಭವದೊಳು…… ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯಲಿಂಗ ನೀನೆಂದು ತಿಳಿಪುವದೆ ಅ……ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲದು ಸತ್ಯಶುದ್ಧದೀಕ್ಷೆ. ಯೀ ಸಪ್ತಕವ…… ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]…… ಯ ಕರಣಭಾವರ್ಪಿತಗಳಂ ಸರ್ವಕಾಲದೊಳು ಇಷ್ಟಪ್ರಾಣವಾಸಲಿಂಗಂ …….ದಿರ್ಪುದೆ…….ದೀಕ್ಷೆಯೆನಿಪುದು. ಆದಿಮಧ್ಯಾವಸಾರಹಿತ ಶಿವ ತಾನೆ ನಲ……ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶಮಂ ……..(ಅಪೂರ್ಣ)