Index   ವಚನ - 14    Search  
 
ಸತ್ವ ರಜ ತಮವೆಂಬ ಗುಣಂಗಳಲ್ಲಿ ಬದ್ಧನಾದವರಿಗೆಲ್ಲಿಯದೊ ಪರತತ್ವ? ಅವರ ನಡವಳಿಕೆಗಳೆಂತೆಂದಡೆ: ಸ್ಥಿರತ್ವ ಧೀರತ್ವ ಸಮರ್ಥತ್ವ, ಅವಕೃತನ ಲಘುತ್ವ ಸಂತೋಷ ಮೃದುತ್ವ, ಶುಚಿತ್ವ ವ್ಯವಸಾಯದಲ್ಲಿ ಸಾಹಸವುಳ್ಳವನ ನೆನಹು, ಸಾಹಿತ್ಯಗುಣ ಅಧಿಕವಾದ ಲವಲವಿಕೆ, ದಾಂತಿ ಕ್ಷಾಂತಿ ಬಹುಕೃಪೆ ಎಂಬಿವು ಸತ್ವಗುಣ ನೋಡಾ. ಶೂರತ್ವ ಕ್ಷೂರತ್ವ ಅಧಿಕೋತ್ಸವ ಅಹಂಕಾರದೊಡನೆ ಕೂಡಿರುವ ಕದಡಿದ ಗುಣ ಸಹಿತ್ವ ದೃಢತ್ವ ನಿರ್ದಯ ಯೋಗ ಡಂಬು ಎಂಬಿವು ರಜೋಗುಣ ನೋಡಾ. ರತಿಯಿಲ್ಲದಿರುವ ಮಂದ ಜಡ ಪಿಸುಣ ಗುಠತ್ವ ನಿರಾಧಿಕ್ಯತೆ ಮದ ಆಲಸ್ಯ ನಿರೋಧ ಮೂಢತನ ಎಂಬಿವು ತಮೋಗುಣ ನೋಡಿರೆ. ಇಂತೀ ಗುಣತ್ರಯಂಗಳಲ್ಲಿ ಶಬ್ದಿಯಾಗದೆ ನಿಃಶಬ್ದಿಯಾಗದೆ ಕೋಪಿಯಾಗದೆ ಶಾಂತನಾಗದೆ ಶೂನ್ಯನಾಥನೆಂದರಿದವರ ತೋರಯ್ಯ ನಿಮ್ಮ ಧರ್ಮ