Index   ವಚನ - 17    Search  
 
ಗುದ ಸ್ಥಾನದಲ್ಲಿ ಆಧಾರಚಕ್ರ ಚತುಷ್ಕೋಣಿಯಾಗಿಹುದು ಚತುರ್ದಳ ನಾಲ್ಕೆಸಳಪದ್ಮ, ವ ಶ ಷ ಸ ಎಂಬ ನಾಲ್ಕು ಅಕ್ಷರ, ಪೀತವರ್ಣ ಬ್ರಹ್ಮ ಪೂಜಾರಿ, ಪಂಡಿತಾರಾಧ್ಯರು ಆಚಾರ್ಯರು. ಅವರಿಗೆ ಚನ್ನಮಲ್ಲಿಕಾರ್ಜುನದೇವರು ಪ್ರಾಣಲಿಂಗ. ಋಗ್ವೇದ ಗಾಯತ್ರಿಯ ಜಪ, ಓಂ ನಮಃ ಶಿವಾಯ ಎಂಬ ಮಂತ್ರ ಓಂ ನಾಂ ನಾಂ ನಾಂ ನಾಂ ನಾಂ ಎಂಬ ನಾದ ಘೋಷ, ತಾರಕಾಕೃತಿ ಅನಾದಿ ಕ್ಷೇತ್ರ ಸಂಜ್ಞೆ, ನ ಕಾರವೆ ಬೀಜಾಕ್ಷರ, ಭಕ್ತನೆ ಅಧಿದೇವತೆ, ಆ ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ, ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರಲಿಂಗ;ಅದು ಬಾಲಕೋಟಿ ಸೂರ್ಯಪ್ರಕಾಶ, ಅದು ಭಕ್ತನಾಚಾರಲಿಂಗವು. ಆ ಭಕ್ತಂಗೆ ನಿವೃತ್ತಿಯೆ ಕಲೆ, ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಗಂಧ ವಿಷಯ, ಆ ವಿಷಯ ಸುಪದಾರ್ಥವನು ಕುಚಿತ್ತವಳಿದು ಸುಚಿತ್ತ ನೆಲೆಗೊಂಡು ಶ್ರದ್ಧಾಭಕ್ತಿಯಿಂದ ನಾಲ್ಕೆಸಳ ತಾವರೆಯ ಪುಷ್ಪ ಸುಪರಿಮಳ ದ್ರವ್ಯವನು ಆಚಾರಲಿಂಗಕ್ಕೆ ಅರ್ಪಿಸಿ ಆ ಪರಿಣಾಮವನು ಮಹಾಲಿಂಗದಲ್ಲಿ ತೃಪ್ತಿಯನೆಯ್ದಿ ಪಶ್ಚಿಮದಿಕ್ಕಿನ ಸದ್ಯೋಜಾತಮುಖವನರಿದು ಮಾಡುವುದೆ ಭಕ್ತಸ್ಥಲ. ಇನ್ನು ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನ ಚಕ್ರ ದ್ವಿಮೂಲೆಯಾಕಾರ ಹಳ್ಳವಾಗಿಹುದು. ಷಡ್ದಳ ಪದ್ಮ, ಬ ಭ ಮ ಯ ರ ಲ ಎಂಬಾರಕ್ಷರ ಪಚ್ಚೆಯ ವರ್ಣ ವಿಷ್ಣು ಪೂಜಾರಿ ಏಕೋರಾಮಯ್ಯ ಆಚಾರ್ಯರು ಅವರಿಗೆ ಭೋಗಮಲ್ಲಿಕಾರ್ಜುನದೇವರೆ ಪ್ರಾಣಲಿಂಗ. ಯಜುರ್ವೇದ ಷಟ್ಟದ ಗಾಯಿತ್ರಿಯ ಜಪ ನಮಃಶಿವಾಯ ಎಂಬ ಪ್ರಸಾದ ಪಂಚಾಕ್ಷರಿ ಮಂತ್ರ ಓಂ ಮಾಂ ಮಾಂ ಮಾಂ ಮಾಂ ಮಾಂ ಎಂಬ ನಾದಘೋಷ ದಂಡಕಾಕೃತಿ ಲಿಂಗವೆಂಬ ಸಂಜ್ಞೆ, ಮಕಾರವೆಂಬ ಬೀಜಾಕ್ಷರ, ಮಹೇಶ್ವರಧಿದೇವತೆ ಆ ಮಹೇಶ್ವರಂಗೆ ಅಪ್ಪುವೆ ಅಂಗ, ಆ ಅಂಗಕ್ಕೆ ಸುಬುದ್ಧಿಯೆ ಹಸ್ತ, ಆ ಹಸ್ತಕ್ಕೆ ಕರ್ತೃ ಸಾದಾಖ್ಯ, ಆ ಸಾದಾಖ್ಯಕ್ಕೆ ಜ್ಞಾನಶಕ್ತಿ, ಆ ಶಕ್ತಿಗೆ ಗುರುಲಿಂಗ, ಅದು ನೀಲವರ್ಣ, ದ್ವಿಕೋಟಿ ಸೂರ್ಯಪ್ರಕಾಶ ಅದು ಮಾಹೇಶ್ವರ ಗುರುಲಿಂಗ ಆ ಮಾಹೇಶ್ವರಂಗೆ ಪ್ರತಿಷ್ಠೆಯೆ ಕಲೆ, ಆ ಕಲೆಗೆ ಜಿಹ್ವೇಂದ್ರಿಯವೆ ಮುಖ, ಆ ಮುಖಕ್ಕೆ ರಸ ವಿಷಯ, ಆ ವಿಷಯ ಸುಪದಾರ್ಥವನು ಕುಬುದ್ಧಿಯಳಿದು ಸುಬುದ್ಧಿ ನೆಲೆಗೊಂಡು ನೈಷ್ಠಿಕಾಭಕ್ತಿಯ ಆರೆಸಳಿನ ಪುಷ್ಪ ಸುಪರಿಮಳ ದ್ರವ್ಯದ ಗುರುಲಿಂಗಕ್ಕೆ ಅರ್ಪಿಸಿ ಆ ಪರಿಣಾಮದನುವನು ಮಹಾಲಿಂಗದಲ್ಲಿ ತೃಪ್ತಿಯನೆಯ್ದಿ ಉತ್ತರದಿಕ್ಕಿನ ವಾಮದೇವ ಮುಖವನರಿದು ಮಾಡುವುದೆ ಪರಮವೀರಕ್ತಿ. ಅದೇ ಮಾಹೇಶ್ವರ ಸ್ಥಲವು. ಇನ್ನು ನಾಭಿ ಸ್ಥಾನದಲ್ಲಿ ಮಣಿಪೂರಕ ಚಕ್ರ ತ್ರಿಕೋಣೆಯಾಕಾರ, ಅಗ್ನಿಯ ಜಿಹ್ವೆಯಂತಿಹುದು. ದಶದಳಪದ್ಮ, ಡ ಢ ಣ, ತ ಥ ದ ಧ ನ, ಪ ಫ ಎಂಬ ದಶಾಕ್ಷರ ರಕ್ತವರ್ಣ ರುದ್ರ ಪೂಜಾರಿ ಮರುಳಸಿದ್ಧೇಶ್ವರರು ಆಚಾರ್ಯರು ಅವರಿಗೆ ಕಪಿಲ ಸಿದ್ಧಮಲ್ಲಿಕಾರ್ಜುನದೇವರೆ ಪ್ರಾಣಲಿಂಗ, ಸಾಮವೇದ ತ್ರಿಪದ ಗಾಯತ್ರಿಯ ಜಪ, ಶಿವಾಯ ನಮಃ ಎಂಬ ಮಾಯಖ್ಯ ಮಂಚಾಕ್ಷರಿಯ ಮಂತ್ರ, ಓಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ನಾದಘೋಷ. ಕುಂಡಲಾಕೃತಿ ಶರೀರವೆಂಬ ಸಂಜ್ಞೆ, ಶಿಕಾರವೆ ಬೀಜಾಕ್ಷರ, ಪ್ರಸಾದಿಯೆ ಅಧಿದೇವತೆ, ಪ್ರಸಾದಿಗೆ ಅಗ್ನಿಯೆ ಅಂಗ, ಆ ಅಂಗಕ್ಕೆ ನಿರಹಂಕಾರವೆ ಹಸ್ತ, ಆ ಹಸ್ತಕ್ಕೆ ಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಇಚ್ಚಾಶಕ್ತಿ, ಆ ಶಕ್ತಿಗೆ ಶಿವಲಿಂಗ ಅದು ಪುಷ್ಪರಾಗವರ್ಣ, ತ್ರಿಕೋಟಿ ಸೂರ್ಯಪ್ರಕಾಶ. ಅದು ಪ್ರಸಾದಿಯ ಶಿವಲಿಂಗ. ಆ ಪ್ರಸಾದಗೆ ವಿದ್ಯಾ ಕಲೆ, ಆ ಕಲೆಗೆ ನೇತ್ರೇಂದ್ರಿಯವೆ ಮುಖ, ಆ ಮುಖಕ್ಕೆ ರೂಪು ವಿಷಯ, ಆ ವಿಷಯ ಸುಪದಾರ್ಥವನು ಅಹಂಕಾರವಳಿದು ನಿರಹಂಕಾರ ನೆಲೆಗೊಂಡು ಅವಧಾನಭಕ್ತಿಯಿಂದ ದಶ ಎಸಳಿನ ತಾವರೆಯ ಪುಷ್ಪ ಸುಪರಿಮಳ ದ್ರವ್ಯವನು ಶಿವಲಿಂಗಕ್ಕೆ ಅರ್ಪಿಸಿ ಆ ಪರಿಣಾಮವನು ಮಹಲಿಂಗದಲ್ಲಿ ತೃಪ್ತಿಯನೆಯ್ದಿ ದಕ್ಷಿಣ ದಿಕ್ಕಿನ ಅಘೋರಮುಖವನರಿದು ಮಾಡುವುದೆ ಪ್ರಸಾದಿ ಸ್ಥಲವು. ಇನ್ನು ಹೃದಯಸ್ಥಾನದಲಿ ಅನಾಹುತ ಚಕ್ರ. ಷಟ್ಕೋಣೆಯಾಕಾರ ಸಂಚಲವಾಗಿಹುದು. ದ್ವಾದಶ ಎಸಳಿನ ಪದ್ಮ, ಕ ಖ ಗ ಘ ಙ, ಚ ಛ ಜ ಝ ಞ, ಟ ಠ ಎಂಬ ದ್ವಾದಶಾಕ್ಷರ ಕುಂಕುಮ ವರ್ಣ, ಈಶ್ವರ ಪೂಜಾರಿ, ರೇವಣಸಿದ್ಧೇಶ್ವರನು ಅಚಾರ್ಯರು. ಅವರಿಗೆ ಶಾಂತಮಲ್ಲಿಕಾರ್ಜುನದೇವರೆ ಪ್ರಾಣಲಿಂಗ ಅಥರ್ವಣ ವೇದ, ಪರಮ ಗಾಯಿತ್ರಿಯ ಜಪ, ವ ಶಿ ಯ ನಮಃ ಎಂಬ ಮಂತ್ರ. ಓಂ ವಾಂ ವಾಂ ವಾಂ ವಾಂ ವಾಂ ಎಂಬ ನಾದಘೋಷ. ಅರ್ಧಚಂದ್ರಾಕೃತಿ, ಗೂಢವೆಂಬ ಸಂಜ್ಞೆ, ವಕಾರವೆ ಬೀಜಾಕ್ಷರ ಪ್ರಾಣಲಿಂಗಿಯೆ ಅಧಿದೇವತೆ, ಆ ಪ್ರಾಣಲಿಂಗಿಗೆ ವಾಯುವೆ ಅಂಗ, ಆ ಅಂಗಕ್ಕೆ ಸುಮನವೆ ಹಸ್ತ, ಆ ಹಸ್ತಕ್ಕೆ ಅಮೂರ್ತಿ ಸಾದಾಖ್ಯ, ಆ ಸಾದಾಖ್ಯಕ್ಕೆ ಅದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಅದು ಮೌಕ್ತಿಕ ವರ್ಣ, ಚತುಃಕೋಟಿ ಸೂರ್ಯಪ್ರಕಾಶ ಅದು ಪ್ರಾಣಲಿಂಗಿಯ ಜಂಗಮಲಿಂಗ, ಆ ಪ್ರಾಣಲಿಂಗಿಗೆ ಶಾಂತಿಯೆ ಕಲೆ, ಆ ಕಲೆಗೆ ತ್ವಗಿಂದ್ರಿಯವೆ ಮುಖ ಆ ಮುಖಕ್ಕೆ ಸ್ಪರ್ಶನವೆ ವಿಷಯ, ಸುಪದಾರ್ಥವನು ಕುಮನವಳಿದು ಸುಮನ ನೆಲೆಗೊಂಡು ಅನುಭಾವ ಭಕ್ತಿಯಿಂದ ದ್ವಾದಶ ಎಸಳಿನ ತಾವರೆಯ ಪುಷ್ಪ ಸುಪರಿಮಳ ದ್ರವ್ಯವನು ಚರಲಿಂಗಕ್ಕೆ ಅರ್ಪಿಸಿ ಆ ಪರಿಣಾಮವನು ಮಹಾಲಿಂಗದಲ್ಲಿ ತೃಪ್ತಿಯನೆಯ್ದಿ ಪೂರ್ವದಿಕ್ಕಿನ ತತ್ಪುರುಷಮುಖವನರಿದು ಮಾಡುವುದೆ ಪ್ರಾಣಲಿಂಗಿಯ ಸ್ಥಲವು. ಇನ್ನು ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ ವರ್ತುಳಾಕಾರದಂತಿಹುದು. ಷೋಡಶದಳ ಪದ್ಮ, ಅ ಆ ಇ ಈ ಉ ಊ ಋ ಋ ಲೃ ಲೃ ಏ ಐ ಓ ಔ ಅಂ ಆಃ ಎಂಬ ಷೋಡಶಾಕ್ಷರ, ಕೃಷ್ಣವರ್ಣ, ಸದಾಶಿವ ಪೂಜಾರಿ, ಅನಿಮಿಷದೇವರೆ ಆಚಾರ್ಯರು. ಅವರಿಗೆ ಅಮರೇಶ್ವರ ಮಲ್ಲಿಕಾರ್ಜುನದೇವರೆ ಪ್ರಾಣಲಿಂಗ ಧನುರ್ವೇದ, ಹಂಸಗಾಯತ್ರಿಯ ಜಪ, ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಓಂ ಯಾಂ ಯಾಂ ಯಾಂ ಯಾಂ ಯಾಂ ಎಂಬ ನಾದಘೋಷ, ಬಿಂದು ಕೃತಿ, ಪರವೆಂಬ ಸಂಜ್ಞೆ, ಯಕಾರವೆ ಬೀಜಾಕ್ಷರ ಅಧಿದೇವತೆಯೆ ಶರಣನು, ಆ ಶರಣನ ಅಣಗಾಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನ ಹಸ್ತ, ಆ ಹಸ್ತಕ್ಕೆ ಶಿವಸಾದಾಖ್ಯ, ಆ ಸಾದಾಖ್ಯಕ್ಕೆ ಪರಾಶಕ್ತಿ ಆ ಶಕ್ತಿಗೆ ಪ್ರಸಾದ ಲಿಂಗ, ಅದು ವೈಢೂರ್ಯ ವರ್ಣ, ಆ ವರ್ಣಕ್ಕೆ ಪಂಚಕೋಟಿ ಸೂರ್ಯಪ್ರಕಾಶ, ಅದು ಶರಣನ ಪ್ರಸಾದಲಿಂಗವು ಅದು ಶರಣಂಗೆ ಶಾಂತ್ಯತೀತ ಕಲೆ, ಆ ಕಲೆಗೆ ಶ್ರೋತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಶಬ್ದ ವಿಷಯ, ಆ ವಿಷಯ ಸುಪದಾರ್ಥವನು ಅಜ್ಞಾನವಳಿದು ಸುಜ್ಞಾನ ನೆಲೆಗೊಂಡು ಆನಂದ ಭಕ್ತಿಯಿಂದ ಷೋಡಶ ಎಸಳಿನ ತಾವರೆಯ ಪುಷ್ಪ ಸುಪರಿಮಳ ದ್ರವ್ಯವನು ಪ್ರಸಾದಲಿಂಗಕ್ಕೆ ಅರ್ಪಿಸಿ [ಆ] ಪರಿಣಾಮವನು ಮಹಾಲಿಂಗದಲ್ಲಿ ತೃಪ್ತಿಯನೆಯ್ದಿ ಈಶಾನ್ಯ ದಿಕ್ಕಿನ ಊರ್ಧ್ಯಮುಖವನರಿದು ಮಾಡುವುದೆ ಶರಣಸ್ಥಲವು ಇನ್ನು ಭ್ರೂಮಧ್ಯದಲ್ಲಿ ಆಜ್ಞಾಚಕ್ರ ತಮಂಧಾಕಾರ ಅಖಂಡ ಪರಿಪೂರ್ಣವಾಗಿಹುದು ಅದು ದ್ವಿದಳ ಪದ್ಮ, ಒಂದು ಬಳಿದು ಒಂದು ಕೆಂಪು, ಎರಡೆಸಳಿನ ಪದ್ಮ, ಹಂ ಕ್ಷಂ ಎಂಬೆರಡಕ್ಷೆ. ಆ ಎರಡು ಶ್ರೀಗುರುವಿನ ಪಾದವು, ಪರಶಿವ ಪೂಜಾರಿ ಘಂಟಾಕರ್ಣದೇವರು ಆಚಾರ್ಯರು ಅವರಿಗೆ ಅಮೃತ ಮಲ್ಲಿಕಾರ್ಜುನದೇವರ ಪ್ರಾಣಲಿಂಗ ಪರಸ್ವಯವಾದ ಗಾಯತ್ರಿಯ ಜಪ. ಓಂ ಹ್ರಾಂ ಹ್ರಿಂ ಹ್ರೊಂ ಹ್ರೇಂ ಹ್ರೌ ಹ್ರಃ ಎಂಬ ಶಾಂತ ಪಂಚಾಕ್ಷರಿಯಮಂತ್ರ, ಓಂ ಓಂ ಎಂಬ ನಾದಘೋಷ. ಅವರ್ಣ ಕೃತಿ ನೀರಾಳವೆಂಬ ಸಂಜ್ಞೆ, ಓಂಕಾರವೇ ಬೀಜಾಕ್ಷರ, ಉಮಾಧವ ಕರ್ತ, ಅದು ಐಕ್ಯತ್ವ. ಆ ಐಕ್ಯಂಗೆ ಆತ್ಮನೆ ಅಂಗ, ಆ ಅಂಗಕ್ಕೆ ಸ್ವಭಾವವೆ ಹಸ್ತ, ಆ ಹಸ್ತಕ್ಕೆ ಮಹಾಸಾದಾಖ್ಯ, ಆ ಸಾದಾಖ್ಯ್ಕಕೆ ಚಿಚ್ಛಕ್ತಿ. ಆ ಶಕ್ತಿಗೆ ಮಹಾಲಿಂಗ. ಅದು ಐಕ್ಯನ ಮಹಾಲಿಂಗವು. ಆ ಐಕ್ಯಂಗೆ ಶಾಂತ್ಯತೀತೋತ್ತರೆಯೆ ಕಲೆ, ಆ ಕಲೆಗೆ ನಿರ್ಭಾವವೆ ಮುಖ, ಆ ಮುಖಕ್ಕೆ ಪರಮಾನಂದವೆ ವಿಷಯ, ಆ ವಿಷಯ ಸುಪದಾರ್ಥವನು ಸದ್ಭಾವವಳಿದು ನಿರ್ಭಾವ ನೆಲೆಗೊಂಡು ಸಮರಸ ಭಕ್ತಿಯಿಂದ ನಾಹಂ ಕೋಹಂ ಕಳೆದು ಸೋಹಂ ಎಂದು ಚಿದ್ರೂಪ ಚಿನ್ಮಯ ಚಿತ್ಪ್ರಕಾಶವನುಳ್ಳ ಮಹಾಲಿಂಗಕ್ಕೆ ತೃಪ್ತಿಯನೆಯ್ದಿ ಅಂತದಿಕ್ಕಿನ ಗಂಭೀರ ಮುಖವನರಿದು ಮಾಡುವುದೆ ಐಕ್ಯಸ್ಥಲವು. ಇನ್ನು ಬ್ರಹ್ಮರಂಧ್ರವೆಂಬ ಗಗನಮಂಟಪದಲ್ಲಿ ಬ್ರಹ್ಮಚಕ್ರವಿಹುದು. ಅದಕ್ಕೆ ಸಹಸ್ರದಳ ಪದ್ಮ., ಸಹಸ್ರಾಕ್ಷರ, ಗೋಮಯ ವರ್ಣ, ದಿವ್ಯತೇಜೋಪರಿ, ಬಯಲಬೊಮ್ಮವೆ ಆಚಾರ್ಯರು ಅವರಿಗೆ ಅಮೃತಮಯವಾದ ಚಿದ್ರೂಪವೆ ಪ್ರಾಣಲಿಂಗ. ಗಾಂಧರ್ವವೆಂಬ ವೇದ, ಪ್ರಣವಮಾಲೆಯ ಗಾಯಿತ್ರಿ ಜಪ, ಓಂ ಮೇಂ ವಾಂ ಮೇಂ ಓಂ ಎಂಬ ಮೂಲ ಪಂಚಾಕ್ಷರಿ ಮಂತ್ರ. ಓಂ ಳ್ ಳ್ ಳ್ ಳ್ ಳ್ ಎಂಬ ಸಹಸ್ರದಳವೆ ನಾದಘೋಷ. ಅವಾಚ್ಯ ಕೃತಿ ನಿಶ್ಚಲಬ್ರಹ್ಮ ಎಂಬ ಸಂಜ್ಞೆ, ಳಕಾರವೇ ಬೀಜಾಕ್ಷರ, ನಿರಂಜನವೆ ಅಧಿದೇವತೆ, ಆ ನಿರಾಂಜನಕ್ಕೆ ಸುರಾಳ ನಿರಾಳವೆ ಅಂಗ. ಆ ಅಂಗಕ್ಕೆ ಸೋಹಂ ಎಂಬ ಹಸ್ತ, ಆ ಹಸ್ತಕ್ಕೆ ಚತ್ತುಚಿತ್ತಾನಂದವೆಂಬ ಸಾದಾಖ್ಯ, ಆ ಸಾದಾಖ್ಯಕ್ಕೆ ಋಷಭನೆಂಬ ಶಕ್ತಿ ಕ್ರಿಯಾ ಮಾಡುವುದೆ ಇಷ್ಟಲಿಂಗ. ಆ ಲಿಂಗ ಅರ್ಭುತಮಯವಪ್ಪ ಸೂರ್ಯಪ್ರಕಾಶ. ಅದು ನಿರಂಜನ ಸ್ಥ