ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
ʼಎನ್ನ ಬಿಡು, ತನ್ನ ಬಿಡೆʼ ಎಂಬುದು ಕಾಯವಿಕಾರ
ʼಎನ್ನ ಬಿಡು, ತನ್ನ ಬಿಡೆʼ, ಎಂಬುದು ಮನೋವಿಕಾರ!
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುವುದೆ, ಕೂಡಲ ಸಂಗಮದೇವಾ?
Hindi Translationएक खरगोश के पीछे नौ कुत्तों को छोडने की भाँति
काय – विकार कहता है, मुझे छोड़, मुझे छोड़,
मनोविकार कहता है, मुझे छोड़, मुझे छोड़,
करणेंद्रिय रूपी श्वान स्पर्श के पूर्व
कूडलसंगमदेव, मेरा मन तुम्हारे यहाँ पहुँच जाय ॥
Translated by: Banakara K Gowdappa
English Translation Nine hounds unleashed
on a hare,
the body's lusts
cry out:
Let go!
Let go!
Let go! Let go!
cry the lusts
of the mind.
Will my heart reach you,
O lord of the meeting rivers,
before the sensual bitches7
touch and overtake?
Translated by: A K Ramanujan Book Name: Speaking Of Siva Publisher: Penguin Books ----------------------------------
Like nine hounds loosed upon a hare,
My body's passion cry : Let me !
My mind's passions cry : Let me !...
Oh, will my mind reach thee, O Lord
Kūḍala Saṅgama, before
My senses' dog has caught it ?
Translated by: L M A Menezes, S M Angadi
Tamil Translationஒரு முயலினிடத்து ஒன்பது நாயை ஏவியதுபோல்,
என்னைவிடு, தன்னைவிடு என்னும் உடற் விகற்பம்
என்னைவிடு, தன்னைவிடு என்னும் மன விகற்பம்
ஐம்புல நுகர்ச்சியெனும் நாயினைத் தொடு முன்னே
உள்ளம் உன்னையடையுமோ கூடல சங்கமதேவனே.
Translated by: Smt. Kalyani Venkataraman, Chennai
Telugu Translationఒక కుందేటికి తొమ్మిది కుక్కలు తోలినట్లు;
నను విడువడు మనుచుండె కాయవికారము
నను విడువిడు మనుచుండె మనోవికారము;
కరణేంద్రియములను కుక్క ముట్టక ముందె;
మతి నిన్ను సేరగలదే? కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಸಂಸಾರಹೇಯಸ್ಥಲವಿಷಯ -
ಇಂದ್ರಿಯಗಳು
ಶಬ್ದಾರ್ಥಗಳುಕಾಯ = ದೇಹ; ಸೊಣಗ = ನಾಯಿ;
ಕನ್ನಡ ವ್ಯಾಖ್ಯಾನತನು-ಮನದ ಪೊದೆಯಲ್ಲಿ ಮನೆಮಾಡಿ-ಸುತ್ತಿದ ಸಂಸಾರದ ಹಚ್ಚ ಹಸಿರನ್ನು ಮೇದು ಮೆಲುಕು ಹಾಕುತ್ತಿರುವ ಈ ಜೀವನೆಂಬ ಮೊಲಕ್ಕೆ ದಿನಬೆಳಗಾದರೆ ಸುಖದ ಸುಗ್ಗಿಯೆಂದು ಯಾರೂ ಭ್ರಮಿಸಬಾರದು.
ಸಾಮಾನ್ಯ ಮೊಲಕ್ಕೆ ಹೊರಗಡೆಯ ಬೇಡನ ಮತ್ತು ಅವನ ನಾಯಿಗಳ ಕಾಟವಾದರೆ-ಈ ಜೀವ ನೆಂಬ ಮೊಲಕ್ಕೆ ತಾನು ಮನೆಮಾಡಿರುವ ಈ ದೇಹದ ಮತ್ತು ಮನದ ಕಡೆಯಿಂದಲೇ ಮೃತ್ಯುಭಯವು ಅನುಗಾಲವೂ ಅಟ್ಟಿಬರುತ್ತಿರುವುದು. ಆ ಮೃತ್ಯುವ್ಯಾಧನು ಎಡಗೈಯಲ್ಲಿ ಹಿಡಿದಿರುವ ಕಣ್ಣು ನಾಲಗೆ ಮುಂತಾದ ಪಂಚೇಂದ್ರಿಯಗಳೆಂಬ ನಾಡುನಾಯಿಗಳೂ, ಬಲಗೈಯಲ್ಲಿ ಹಿಡಿದಿರುವ ಮನ ಬುದ್ದಿ ಮುಂತಾದ ಅಂತಃಕರಣ ಚುತುಷ್ಟಯವೆಂಬ ಜಾತಿನಾಯಿಗಳೂ-ಒಟ್ಟಾಗಿ ಒಂಬತ್ತೂ ಈ ಜೀವನೆಂಬ ಮೊಲವನ್ನು ನಾ ಹಿಡಿಯುವೆ ತಾ ಹಿಡಿಯುವೆನೆಂದೂ, ನನ್ನ ಬಿಡು ತನ್ನ ಬಿಡೆಂದೂ ಬೊಗಳುತ್ತ ರಭಸದಿಂದ ಜಗ್ಗುತ್ತಿವೆ. ಆಯಕಟ್ಟಾದ ಸಮಯಕ್ಕಾಗಿ ಕಾಯುತ್ತಿರುವ ಆ ಕಾಲಪುರುಷನು ಯಾವಾಗ ಯಾವ ನಾಯಿಯನ್ನು ಛೂ ಬಿಡುವನ್ನೋ-ಈ ಜೀವವೆಂಬ ಮೊಲ ಯಾವ ನಾಯಿಯ ಹಲ್ಲಿಗೆ ಯಾವಾಗ ತನ್ನ ಮಖಮಲ್ಲು ಮೈಯ್ಯನ್ನು ಈಡಾಡಿ ಕೆನ್ನೆತ್ತರನ್ನು ಚೆಲ್ಲಿ ಅದರ ಪ್ರಾಣರಸ ಇಮರಿಹೋಗುವುದೋ ಒಂದೂ ನಿಶ್ಚಯವಿಲ್ಲ.
ಹೀಗಾಗುವ ದುರ್ಗತಿ ನನಗೆ ಬೇಡ, ನಾನು ಈ ಇಂದ್ರಿಯಗಳ ಹಿಡಿತದಿಂದ ದೂರ ಸುದೂರವಾಗಿ ಮಡಿಯಾಗಿ ಶಿವನ ಮಡಿಲಲ್ಲಿರುವೆ-ಎಂದು ಬಸವಣ್ಣನವರು ನಿಶ್ಚಯಿಸುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.