•  
  •  
  •  
  •  
Index   ವಚನ - 218    Search  
 
ಇರುಳಿನ ಮುಖದೊಳಗೊಂದು ನವರತ್ನದಖಂಡಿತ ಹಾರವಡಗಿತ್ತು. ಹಗಲಿನ ಮುಖದೊಳಗೊಂದು ನವಚಿತ್ರಪತ್ರದ ವೃಕ್ಷವಡಗಿತ್ತು. ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ, ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು.
Transliteration Iruḷina mukhadoḷagondu navaratnadakhaṇḍita hāravaḍagittu. Hagalina mukhadoḷagondu navacitrapatrada vr̥kṣavaḍagittu. Ratnada hārava vr̥kṣakkāhāravanikkidaḍe, guhēśvaraliṅgadalli prāṇaliṅgakke sukhavāyittu.
English Translation 2 They don't know the day is the dark's face, and the dark the day's. A necklace of nine jewels lies buried, intact, in the face of the night; in the face of day a tree with leaves of nine designs. When you feed the necklace to the tree, the Breath enjoys it in the Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation रात के मुँह में एक नवरत्न का आकर्षण हार छिपा था। दिन के मुँह में एक नव चित्र पत्र का वृक्ष छिपा था। वृक्ष को उस रत्नाहार आहार समर्पण किये तो, गुहेश्वर लिंग में प्राणलिंग तृत्प हुआ था। Translated by: Eswara Sharma M and Govindarao B N
Tamil Translation காரிருளில் முழுமையற்ற ஒரு நவரத்தின மாலை மறைய பகலில், இளந்தளிர், இலைகள் நிறைந்த மரம் மறைய இரத்தின மாலையை மரத்திற்கு உணவாகப் படைத்தால் குஹேசுவரலிங்கத்தில் பிராணலிங்கத்திற்கு இன்பமாயிற்று. Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಕ್ಕಿದಡೆ = ಸಮರ್ಪಿಸಿದರೆ; ಇರುಳು = ಅಜ್ಞಾನದ ಸಂಕೇತ; ನವಚಿತ್ರಪತ್ರದ ವೃಕ್ಷ = ಲಿಂಗದ ಸಂಕೇತ, ನವಚಿತ್ರ ಪತ್ರಗಳಿಂದ ಕೂಡಿದ ವೃಕ್ಷ; ವಿವಿಧ ಆಕಾರದ ಪಲ್ಲವ, ಪತ್ರಗಳಿಂದ ಕೂಡಿದ ಮರ; ನವರತ್ನದ ಖಂಡಿತ ಹಾರ = ಸೃಷ್ಟವಾದ ಆಕರ್ಷಕವಾದ ವೈವಿಧ್ಯಮಯ ತತ್ವ್ತಗಳಿಂದಲೂ ವಸ್ತುಗಳಿಂದಲೂ ಕೂಡಿದ ವಿಶ್ವ.; ಪ್ರಾಣಲಿಂಗಕ್ಕೆ ಅದು = ಸ್ವೀಕೃತವಾಯಿತ್ತು; ರತ್ನದ ಹಾರವನ್ನು = ವಿಶ್ವ ಹಾಗೂ ವಿಶ್ವದ ಭಾವನೆಗಳನ್ನು; ವೃಕ್ಷಕ್ಕೆ = ಲಿಂಗಕ್ಕೆ; ಹಗಲು = ಜ್ಞಾನದ ಸಂಕೇತ; Written by: Sri Siddeswara Swamiji, Vijayapura