Index   ವಚನ - 130    Search  
 
ವ್ರತವೆಂಬುದೇನು? ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ. ವ್ರತವೆಂಬುದೇನು? ಇಂದ್ರಿಯಂಗಳ ಸಂದಮುರಿವ ಕುಲಕುಠಾರ. ವ್ರತವೆಂಬುದೇನು? ಸಕಲ ವ್ಯಾಪಕಕ್ಕೆ ದಾವಾನಳ. ವ್ರತವೆಂಬುದೇನು? ಸರ್ವದೋಷನಾಶನ. ವ್ರತವೆಂಬುದೇನು? ಚಿತ್ತಸುಯಿದಾನದಿಂದ ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ. ವ್ರತವೆಂಬುದೇನು? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರಿಗೆ ತತ್ತಲಮಗನಾಗಿಪ್ಪನು.