ವ್ರತವೆಂಬುದೇನು?
ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು.
ಜಗದ ಕಾಮಿಯಂತೆ ಕಾಮಿಸದೆ,
ಜಗದ ಕ್ರೋಧಿಯಂತೆ ಕ್ರೋಧಿಸದೆ,
ಜಗದ ಲೋಭಿಯಂತೆ ಲೋಭಿಸದೆ,
ಮಾಯಾ ಮೋಹಂಗಳು ವರ್ಜಿತವಾಗಿ
ಮನ ಬಂದಂತೆ ಆಡದೆ, ತನು ಬಂದಂತೆ ಕೂಡದೆ
ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.
Art
Manuscript
Music
Courtesy:
Transliteration
Vratavembudēnu?
Manavikārisuvudakke kaṭṭida gottu.
Jagada kāmiyante kāmisade,
jagada krōdhiyante krōdhisade,
jagada lōbhiyante lōbhisade,
māyā mōhaṅgaḷu varjitavāgi
mana bandante āḍade, tanu bandante kūḍade
vratadaṅgakke saṅgavāgi ninda sadbhaktana aṅgave
ācārave prāṇavāda rāmēśvaraliṅgadaṅga.