Index   ವಚನ - 149    Search  
 
ಸ್ಥಾವರಕ್ಕೆ ಲಿಂಗ ಮುದ್ರೆ, ಪಾಷಾಣಕ್ಕೆ ಲಿಂಗ ಮುದ್ರೆ, ಗೋವಿಗೆ ಲಿಂಗ ಮುದ್ರೆ, ಮತ್ತಾವಾವ ರೂಪಿನಲ್ಲಿ ಲಿಂಗಾಂಕಿತವ ಮಾಡಿದಡೂ ಪ್ರೇತಾಂಕಿತಭೇದ. ಅದೆಂತೆಂದಡೆ: ತರು ಫಲವ ಹೊತ್ತಂತೆ ಸವಿಯನರಿಯವಾಗಿ. ಮಾಡಿಕೊಂಡ ನೇಮಕ್ಕೆ ತಮ್ಮ ಭಾವದ ಶಂಕೆಯಲ್ಲದೆ ಧರಿಸಿದ್ದವು ಇದಾವ ಲಿಂಗವೆಂದರಿಯವು. ತಾನರಿದು ಆ ವ್ರತ ನೇಮ ಮಾಟವ ಮಾಡುವಲ್ಲಿ ಶೀಲದ ತೊಡಿಗೆ, ನೇಮದ ಖಂಡಿತ, ಮಾಟದ ಕೂಟ ಇಂತಿವನರಿದು ತನುವಿಂಗಾಚಾರ, ಮನಕ್ಕೆ ವ್ರತ, ಮಾಟಕ್ಕೆ ನೇಮ, ಕೂಟಕ್ಕೆ ನಿಶ್ಚಯ. ಇಂತೀ ಮರ್ತ್ಯದ ಆಟವುಳ್ಳನ್ನಕ್ಕ ಸದಾತ್ಮನಿಹಿತವಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.