ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು
ತಮ್ಮ ತಮ್ಮ ಮಾರ್ಗದ ಕಲೆಯಲ್ಲಿಯೆ ಎಯ್ದಿ,
ಜಪ ತಪ ನೇಮ ನಿತ್ಯಂಗಳು
ತಪ್ಪದೆ ಮಹಾದೇವನ ಓಲೈಸಿದರಾಗಿ,
ಇದು ಕಾರಣದಲ್ಲಿ ಕೊಂಡ ವ್ರತಕ್ಕೆ ಹಾನಿಯಿಲ್ಲದೆ,
ನೇಮಕ್ಕೆ ಅನುಸರಣೆಯಿಲ್ಲದೆ,
ತಾ ನಡೆವಲ್ಲಿ, ಇದಿರ ತಾ ಕಾಬಲ್ಲಿ,
ಅಣುಮಾತ್ರ ತಪ್ಪದೆ, ಕ್ಷಣಮಾತ್ರ ಸೈರಿಸದೆ,
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದ ಹಾದಿಯನರಿಯಬೇಕು.
Art
Manuscript
Music
Courtesy:
Transliteration
Hari brahma dēvarkaḷu muntāgi iddavarellaru
tam'ma tam'ma mārgada kaleyalliye eydi,
japa tapa nēma nityaṅgaḷu
tappade mahādēvana ōlaisidarāgi,
idu kāraṇadalli koṇḍa vratakke hāniyillade,
nēmakke anusaraṇeyillade,
tā naḍevalli, idira tā kāballi,
aṇumātra tappade, kṣaṇamātra sairisade,
ācārave prāṇavāda
rāmēśvaraliṅgada hādiyanariyabēku.