Index   ವಚನ - 154    Search  
 
ಹೊಳೆಯ ಹರುಗೋಲಲ್ಲಿಯೆ ಮೆಟ್ಟಡಿಯ ಮೆಟ್ಟಿಹೆನೆಂದು ಚರ್ಮಕ್ಕೆ ಕೊಟ್ಟು ತನ್ನ ಠಾವಿನಲ್ಲಿ ಕಚ್ಚಾಡಲೇತಕ್ಕೆ? ಆ ಗುಣ ವ್ರತನೇಮಿಗಳಿಗೆ ನಿಶ್ಚಯವೆ? ಕೊಟ್ಟಲ್ಲಿ ಬೇಯದೆ ತಂದಲ್ಲಿ ನೋಯದೆ ಭಕ್ತರ ಒಡೆಯರ ಚಿತ್ತವಿದ್ದಂತೆ ಅಚ್ಚೊತ್ತಿದಂತಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮ ಸಂದಿತ್ತು.