Index   ವಚನ - 153    Search  
 
ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳಬಹುದೆ? ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು? ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ ಇಂತಿವ ಹೇಸಿ ಶೀಲವಂತನಾಗಬೇಕು. ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು. ಇಂತೀ ವ್ರತದ ಆಗುಚೇಗೆಯನರಿದ ಮತ್ತೆ ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.