Index   ವಚನ - 7    Search  
 
ಅರಿದ ಬಳಿಕ ಗರುಡಿಯ ಹೋಗಲೇತಕ್ಕೆ? ನಿಸ್ಸಾಧಕವ ಸಾಧಿಸಿದ ಬಳಿಕ ಸಾಧಿಸಲೇತಕ್ಕೆ? ಪಟುಭಟ ಬಂದಲ್ಲಿ ಪರಾಕ್ರಮವ ತೋರದಿರಬೇಕು. ಮೈಯೆಲ್ಲಾ ಕಣ್ಣಾಗಿಪ್ಪವರು ಬಂದು ಮಥನಿಸಿದಡೆ ಮಾತಾಡದೆ ಇರಬೇಕು. ಹೊದ್ದಿಯೂ ಹೊದ್ದದ ಸದ್ಯೋನ್ಮುಕ್ತನಾಗಿರಬಲ್ಲರೆ ಅಮುಗೇಶ್ವರಲಿಂಗವು ಎಂಬೆನು.