Hindi Translationसेवक पर स्वामी प्रसन्न हो
तो उसे उत्तम पद देना छोड देगा?
जुलाहा दासय्या पर प्रसन्न होनेवाला
कोई अन्य देव था ?
मातंग चन्नय्या डोम कक्कय्य
और तेलुगु जोमय्या पर
प्रसन्न होनेवाला कोई अन्य देव था?
मेरे मन के पंचेंद्रिय त्वल्लीन हो
तो कूडलसंगमदेव अपनायेंगे ॥
Translated by: Banakara K Gowdappa
English Translation Should a master love his slave,
He cannot fail to honour him:
Is He who loved Dāsa the weaver
Another God?
Is He who loved Cennayya the pariah
Another God? Or He that loved
Kakkayya the tanner, or
Teluga Jommayya?
If the five senses of my mind
Sway towards Thee,Lord Kūḍala Saṅga
Will draw me to Himself.
Translated by: L M A Menezes, S M Angadi
Tamil Translationதொண்டனுக்கு உடையன் அருளின் பதவியை
அளிக்காமல் இருப்பானோ?
தாசிமய்யனுக்கு அருளியோன், வேறொரு கடவுளோ?
சக்கிலி சென்னய்யனுக்கு சண்டாளன் கக்கய்யனுக்கு
தெலுங்கு பொம்மய்யனுக்கு அருளியோன்
வேறொரு கடவுளோ ஐயனே? என் மனமும்
ஐம்புலன்களும் உங்களைச் சார்தர
அவனைப் போலச் செய்வான் கூடல சங்கமதேவன்
Translated by: Smt. Kalyani Venkataraman, Chennai
Telugu Translationస్వామి మెచ్చిన తొ త్తుకు పదవి నీయకమానునే?
దేడర దాసయ్యను మెచ్చినవాడు ‘వేరొక దేవుడే!
డోహర కక్కయ్యను; మాదర చెన్నయ్యను
తెలుగు జోమ్మయ్యను వలచువాడు వేరొక్కడే?
నా మనో పంచేంద్రియములు నీకడనిల్చిన
నీ యంతవానిని చేయవే కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಪ್ರಾಣಲಿಂಗಿ ಸ್ಥಲವಿಷಯ -
ದೇವರು
ಶಬ್ದಾರ್ಥಗಳುತೋತ್ತು = ; ಮಾಣ್ಬು = ;
ಕನ್ನಡ ವ್ಯಾಖ್ಯಾನಬಲ್ಲಹ<ವಲ್ಲಭನೆಂದರೆ ರಾಜ. ಆ ರಾಜನೊಲಿದರೆ ಅವನ ಗುಲಾಮನಿಗೇನು ಕೊರತೆ? ಇವನಿಗೆ ಅವನು ಬೇಕಾದ ಪದವಿಯನ್ನು ಕೊಡುವನು ಸಂಶಯವಿಲ್ಲ. ಹಾಗೆಯೇ ನನ್ನ ವಲ್ಲಭನಾದ ಶಿವನು-ಅವನ ಗುಲಾಮನಾದ ನನಗೂ ಒಲಿಯುವನು. ಹಿಂದೆ ಮಾದಾರ ಚೆನ್ನಯ್ಯನಿಗೆ ಡೋಹಾರ ಕಕ್ಕಯ್ಯನಿಗೆ ತೆಲುಗ ಜೊಮ್ಮಯ್ಯನಿಗೆ ಒಲಿದ ಶಿವನು ನನಗೆ ಒಲಿಯುವುದರಲ್ಲಿ ಸಂಶಯವೇನು ? ಆ ನನ್ನ ಅಂತರಂಗದ ರಾಜನಾದ ಶಿವನಿಗೇ ಅಲ್ಲವೆ ಮಾದಾರ ಚೆನ್ನಯ್ಯ ಮುಂತಾದವರಂತೆ ನಾನು ಗುಲಾಮನಾಗಿರುವುದು? ನನ್ನ ಬ್ರಾಹ್ಮಣಿಕೆಯನ್ನು ನಾನು ಮೊದಲೇ ನಿರಾಕರಿಸಿಕೊಂಡಿರುವೆನಲ್ಲಾ? ಮಾದಾರ ಚೆನ್ನಯ್ಯ ಮುಂತಾದ ದಲಿತರೇ ನನ್ನ ತಂದೆ ತಾತ ಮುತ್ತಾತನೆಂದು ಘೋಷಿಸಿಕೊಂಡಿರುವೆನಲ್ಲಾ ?! ಇನ್ನು ನನ್ನ ಕಣ್ಣು ನಾಲಗೆ ಕಿವಿ ಮೂಗು ಸ್ಪರ್ಶ ಎಂಬ ಪಂಚೇಂದ್ರಿಯಗಳು ಶಿವಪ್ರಪಂಚದಲ್ಲಿ ವ್ಯವಹರಿಸಿತೊಡಗಿದರೆ ಸಾಕು-ಶಿವನು ನನಗೊಲಿಯುವುದರಲ್ಲಿ ಸಂಶಯವಿಲ್ಲವೆನ್ನುತ್ತ ಬಸವಣ್ಣನವರು ಸಡಗರಪಡುತ್ತಿರುವರು.
ವಿ: ತೆಲುಗು ಜೊಮ್ಮಯ್ಯನು ಒಂದು ಕಾಲಕ್ಕೆ ಕಲ್ಯಾಣದ ಪೆರ್ಮಾಡಿ ಎಂಬ ರಾಜನ ಸಾಮಂತನಾಗಿದ್ದನು. ಆ ರಾಜನ ಹೆಂಡತಿ ಲಕುಮಾದೇವಿಯು ಶಿವಭಕ್ತೆ ಮತ್ತು ಜೊಮ್ಮಯ್ಯನ ಶಿಷ್ಯಳೇ ಆಗಿದ್ದಳು. ಈ ಜೊಮ್ಮಯ್ಯನಿಗೆ ರಾಜನು ಮೆಚ್ಚಿ ಕಲ್ಯಾಣಕ್ಕೆ ಒಂದು ಯೋಜನ ದೂರದಲ್ಲಿ ಒಂದು ಶಿವಪುರವನ್ನು ಕಟ್ಟಿಸಿಕೊಡುವನು. ಜೊಮ್ಮಯ್ಯನು ಅದೇ ಶಿವಪುರದಲ್ಲಿದ್ದಾಗ ಕೊಂಡಗುಳಿ ಕೇಶಿರಾಜನೆಂಬ ಮಹಾಶಿವಭಕ್ತನು ಅವನ ದರ್ಶನ ಪಡೆಯಲು ಅಲ್ಲಿಗೆ ಬರುವನು. ತೆಲುಗ ಜೊಮ್ಮಯ್ಯನೊಬ್ಬ ಬೇಡನೆಂಬುದನ್ನು ತಿಳಿದು ಮೊದಲಿಗೆ ಅಸಹ್ಯಪಟ್ಟನಾದರೂ-ಅವನ ಮಹಿಮೆಯನ್ನು ಕಂಡು ತಲೆಬಾಗುವನು. ಈ ಜೊಮ್ಮಯ್ಯನ ಆರಾಧ್ಯದೈವ ಭೀಮನಾಥನೆಂದು. ಆ ದೈವದ ಆ ಹೆಸರೇ ಅವನು ಬರೆದ ವಚನಗಳ ಅಂಕಿತವೂ ಆಗಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.