Index   ವಚನ - 22    Search  
 
ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು ಅರಿಯಲಾರರು ನೋಡಾ. ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ. ಜಂಗಮವಾದೆನೆಂಬವರೆಲ್ಲ ಜಗಭಂಡರಾದರು ನೋಡಾ. ಲಿಂಗೈಕ್ಯನಾದೆನೆಂಬವರೆಲ್ಲ ಅಂಗವಿಕಾರಿಗಳಾದರು ನೋಡಾ. ಅಮುಗೇಶ್ವರಲಿಂಗವನರಿಯದ ಜ್ಞಾನಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು.