Index   ವಚನ - 23    Search  
 
ಉದರ ಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ ಒಡೆಯನ ಗುರುತಬಲ್ಲುದೆ? ಮಳೆಗಾಲದಲ್ಲಿ ಮೀನು ಮಿಡಿಚೆಯ ತಿಂಬ ನರಿ ಕತ್ತಲೆಯಬಲ್ಲುದೆ? ಸತ್ತ ಹಂದಿಯ ತಿಂಬ ನಾಯಿ ಬೆಳುದಿಂಗಳಬಲ್ಲುದೆ? ಕರ್ತನನರಿಯದ ವೇಷಧಾರಿಗಳು ನಿಮ್ಮನೆತ್ತ ಬಲ್ಲರು ಅಮುಗೇಶ್ವರಾ?