Index   ವಚನ - 25    Search  
 
ಎನ್ನ ಅಂಗದಲ್ಲಿ ಅಗಮ್ಯವಾಗಿ ಬಂದಬಳಿಕ, ನಿನ್ನ ನೆನೆವವನಲ್ಲ ನಾನು. ಎನ್ನ ಮನದಲ್ಲಿ ಮನೋಮೂರ್ತಿಯಾಗಿಪ್ಪೆಯಾಗಿ ಮನದಲ್ಲಿ ನೆನೆವವನಲ್ಲವಯ್ಯಾ ನಿನ್ನ. ನೀನೆ ಪತಿಯಾಗಿ ನಾನೆ ಸತಿಯಾದ ಕಾರಣ ನಿನ್ನ ನೆನೆವವನಲ್ಲ ನಾನು; ನಿನ್ನ ಪೂಜಿಸುವವನಲ್ಲ ನಾನು; ನಿನ್ನ ರಚಿಸುವವನಲ್ಲ. ಎನಗೆ ನಿನಗೆ ಸಂದಿಲ್ಲದೆ ಸಮರಸವಯ್ಯಾ. ಎನ್ನ ಅರ್ಚನೆ ಪೂಜನೆ ನಷ್ಟವಾಯಿತ್ತು; ಎನ್ನ ಕ್ರೀ ನಿಃಕ್ರೀಯ ಕೂಡಿತ್ತು. ಸಂದಿಲ್ಲದ ಸಮರಸವಾಗಿ, ನಿಮ್ಮ ಸಂದೇಹವಿಲ್ಲದೆ ಕಂಡೆನು. ಮಹಾಲಿಂಗ ಅಮುಗೇಶ್ವರಲಿಂಗವೆ, ನಿಮ್ಮ ಶರಣ ಪ್ರಭುದೇವರ ಘನವ ನಾನೇನೆಂದುಪಮಿಸುವೆನಯ್ಯಾ.