Index   ವಚನ - 38    Search  
 
ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನ ಮೇಲೆ ಬಿರಿದ. ನಿತ್ಯವುಳ್ಳವನಾಗಿ ಕಟ್ಟಿದೆನು ವಿಷ್ಣುವಿನ ಮೇಲೆ ಬಿರಿದ. ಅವಿರಳ ತತ್ವದಲ್ಲಿ ನಿಂದು, ಬಂದ ಭವಪಾಶಂಗಳ ಹರಿದು ಕುಂದು ಹೆಚ್ಚಿಲ್ಲದೆ ಸಂದೇಹವನತಿಗಳೆದು ಕಟ್ಟಿದೆನು. ಎನ್ನ ಕರಣಂಗಳ ಕಟ್ಟಿದೆನಾಗಿ ರುದ್ರನ ಮೇಲೆ ಕಟ್ಟಿದೆನು ಬಿರಿದ. ಅಮುಗೇಶ್ವರಲಿಂಗವು ಅಪ್ಪಿಕೊಂಡ ಭಾಷೆ.