ಬಸವಣ್ಣ   
Index   ವಚನ - 820    Search  
 
ಗುರುವಿನಲ್ಲಿ ಸದಾಚಾರ: ಲಿಂಗದಲ್ಲಿ ಅನುದಿನ ವೇಳೆ. ಜಂಗಮದಲ್ಲನುಭಾವ, ಸಮಯಾಚಾರ: ಲಿಂಗದಲ್ಲಿ ಅನುದಿನ ವೇಳೆ. ಈ ಉಭಯಾಚಾರದಿಂದ ತಿಳಿದ ತಿಳಿವು: ಲಿಂಗದಲ್ಲಿ ಅನುದಿನ ವೇಳೆ; ಬೇರೆ ತೋರಲಿಲ್ಲಾ: ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ. ಇದು ಕಾರಣ, ಕೂಡಲಸಂಗಮದೇವಾ, ಲಿಂಗದಲ್ಲಿ ಅನುದಿನ ವೇಳೆ!