ಬಸವಣ್ಣ   
Index   ವಚನ - 841    Search  
 
ಅಯ್ಯಾ , ನೀನೆಂದರೆ ಎಂಬೆನು: "ನಿನ್ನ ಹಂಗೇನು ಹರಿಯೇನು? ನಿನ್ನ ಮುಖದಲ್ಲಿ ಒಂದಗುಳು ಸವೆಯದು; ನಿನ್ನ ಪ್ರಸಾದವ ಕೊಂಡೆನ್ನ, ಭವಕ್ಕೆ ಬೀಜವಾಯಿತ್ತು! ಜಂಗಮವೇ ಲಿಂಗವೆಂದು ಒಕ್ಕುದ ಕೊಂಡರೆ ಎನ್ನ ʼಭವಂ ನಾಸ್ತಿʼಯಾಯಿತ್ತು! ಕೂಡಲಸಂಗಮದೇವಾ."