Index   ವಚನ - 49    Search  
 
ಕೊಂಬಿನ ಕುರಿಯಂತೆ ಕೂಗಿದಡೇನು, ಲಿಂಗೈಕ್ಯರಾಗಬಲ್ಲರೆ? ಕೋಟ್ಯನುಕೋಟಿಯನೋದಿದಡೇನು, ಸಾತ್ವಿಕರಾಗಬಲ್ಲರೆ? ಬೆನ್ನುಹುಳಿತ ಕೋಣನಂತೆ ಮನೆಮನೆಯ ತಿರಿದುಂಡಡೇನು, ಮಹಾಜ್ಞಾನಿಯಾಗಬಲ್ಲರೆ? ಅಮುಗೇಶ್ವರಲಿಂಗವನರಿಯದವರು ಓದಿದಡೇನು? ಕತ್ತೆ ಬೂದಿಯಲ್ಲಿ ಬಿದ್ದಂತಾಯಿತು.