Hindi Translationकलाबिंदु वटामुखी नामक बालिका के हाथों में
जलाकार नामक कुंभ था ।
उस कुंभ में चन्नबसवण्णा जल लाया ।
मडिवाळय्या सामग्री लाया ।
इसके चूल्हे तले आग सुलगाओ, कूडलसंगमदेव ॥
Translated by: Banakara K Gowdappa
English Translation A female child
Called Kāḷabinduvaṭāmukhi
Had in her hands a pot
Called form-of-water: thereto
Chennabasavaṇṇa brought water, and
Madīvallayya ingredients;
Beneath its oven light the fire.
O Lord, Kūḍala Saṅga
Translated by: L M A Menezes, S M Angadi
Tamil Translationகலை, பிந்து ஆலமரப்பரப்பனைய
உடைய பெண்ணின் கையில்
உடல் என்னும் பானை உள்ளது
அப்பானையில் சென்ன பசவண்ணல்
நீரை நிறைத்தனன், மடிவாளய்யன்
பொருளை இட்டனன், இதனை
உலையின் மீது இட்டு அருள்வாய்
கூடல சங்கமதேவேன.
Translated by: Smt. Kalyani Venkataraman, Chennai
Telugu Translationకళా బిందువటాముఖి యనుకన్నె చంకలో
జలాకారమను కుండయుండె; ఆ కుండతో
చెన్న బనవన్న నీరు దెచ్చె; మాచయ్య సామగ్రిగొని తెచ్చె
ఈ పొయ్యి నిక ముట్టింపుమయ్యా సంగయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಭಕ್ತಸ್ಥಲವಿಷಯ -
ಜಾತಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಬಿಂದುವೆಂದರೆ ಶಕ್ತಿ, ಕಳೆಯೆಂದರೆ ಸೃಷ್ಟಿ –ವಟಾಮುಖಿಯೆಂದರೆ ಈ ಸೃಷ್ಟಿಗೆ ಪ್ರಮುಖೆಯಾದ ಮಾಯೆ. ಈ ಮಾಯೆ ಬಿಂದುವಿಂದ ಉದ್ಭವಿಸಿ ಕಳೆಯಲ್ಲಿ ವಿಸ್ತೃತಗೊಂಡವಳಾಗಿ ಕಳಾಬಿಂದುವಟಾಮುಖಿ, ಇವಳ ಕೈಯಲ್ಲಿ ಒಂದು ಗಡಿಗೆಯೆಂದರೆ ಜೀವಜಲಕ್ಕಾಧಾರವಾದ ದೇಹ. ಈ ದೇಹವು ಶುಕ್ಲಶೋಣಿತಗಳ ಸಂಘಾತದಿಂದ ರೂಪಧರಿಸಿತಾಗಿ “ಜಲಾಕಾರ”ವೆಂದು ಅನ್ವರ್ಥವಾಗಿ ಕರೆಯಲ್ಪಡುವುದು.
ಈ (ಜಲಾಕಾರ) ದೇಹವೆಂಬ ಗಡಿಗೆಯಲ್ಲಿ ನಿರ್ಮಲವಾದ ಮನಸ್ಸೆಂಬ ನಿರ್ಮಲೋದಕ ಚೆನ್ನಬಸವಣ್ಣನಿಂದ ತುಂಬಲಾಯಿತೆಂದೂ, ಹಸನಾದ ಜೀವಚೈತನ್ಯವೆಂಬ ಅಕ್ಕಿಬೇಳೆ ವಗೈರೆ ಮಡಿವಾಳ ಮಾಚಯ್ಯನಿಂದ ಸುರಿಯಲಾಯಿತೆಂದೂ –ಈಗ ಅದನ್ನು ಪಕ್ವಮಾಡಿ ಗುರುಲಿಂಗ ಜಂಗಮ ದಾಸೋಹದಲ್ಲಿ ವಿನಿಯೋಗ ಮಾಡಲು ಅನುವಾಗಲೋಸುಗ ಜ್ಞಾನಾಗ್ನಿಯನ್ನು ಹೊತ್ತಿಸಿಕೊಡೆಂದು ಕೂಡಲಸಂಗಮದೇವರನ್ನು ಬಸವಣ್ಣನವರು ಪ್ರಾರ್ಥಿಸುತ್ತಿರುವರು.
ಬಸವಣ್ಣನವರಿಗೆ ಪ್ರಾಣಲಿಂಗೋಪದೇಶ ಮಾಡಿದವರು ಚೆನ್ನಬಸವಣ್ಣನವರೆಂದೂ, ದಂಡಿಸಿ ಶಿಕ್ಷಿಸಿ ಸರ್ವಸಂಪನ್ನತೆಯನ್ನು ಒದಗಿಸಿದವರು ಮಡಿವಾಳಮಾಚಿದೇವರೆಂದೂ ಬಸವಪುರಾಣಗಳಲ್ಲಿ ಹೇಳಿರುವುದು ಪ್ರಸಿದ್ಧವೇ ಇದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.