Hindi Translationसत्य है, शांति है, यह क्या है जो मन में नहीं आता?
सर्व-सम्मत सुख है, यह क्या है स्पर्श मन को नहीं होता?
तुम महान हो, इसमें कोई भ्रम है कूडलसंगमदेव?
Translated by: Banakara K Gowdappa
English Translation There's truth, there is content: what thing is this
That will not come unto the heart?
There's joy that pleases all around:
What thing is this that will not touch the heart?
This greatneses that is you,
O Kūḍala Saṅgama Lord,
Is it a dream?
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಬಸವಣ್ಣನವರು ಪ್ರಾಣಲಿಂಗವನ್ನು ಸಿದ್ಧಿಸಿಕೊಂಡಿದ್ದಾರೆ. ಅದು ಅವರ ಸರ್ವಾಂಗದಲ್ಲಿ ತುಂಬಿ ಪ್ರವಹಿಸುತ್ತಿದೆ. ಆ ಆತ್ಮಸಿದ್ಧಿಯ ವಿಜಯೋತ್ಸಾಹದಲ್ಲಿ ಲಿಂಗಕ್ಕೆ ಅಭಿಷೇಕಿಸೋಣವೆಂದರೆ ಆ ಪ್ರಾಣಲಿಂಗ ಬಾಹ್ಯ ಉಪಚಾರಗಳೊಂದಕ್ಕೂ ಸಿಲುಕದೆ ಅತೀತದಲ್ಲಿ ರಾರಾಜಿಸುತ್ತಿದೆ.
ಮತ್ತು ಆ ಪ್ರಾಣಲಿಂಗಾಗ್ರದ ಅಧಿಮಾನಸ ಪ್ರವಾಹದಲ್ಲಿ ಅವಗಾಹವಿದ್ದು ಅವರಿಗೆ ಸುಖಾನಂದವಾಗಿದೆ –ಆ ಜೊಮ್ಮಿನಲ್ಲೇ ಅದನ್ನು ಮುಂದೆ ಮುಂದೆ ಪರಿಭಾವಿಸೋಣವೆಂದರೆ ಅದು ಯಾವ ಕಲ್ಪನೆಗೂ ಒಳಗಾಗದೆ ನಿಲುಕದೆ ನಿರಾಲಂಬದಲ್ಲಿ ನಿಂತಿದೆ. ಆ ದಿವ್ಯಾನುಭೂತಿಯಲ್ಲಿ ಬಸವಣ್ಣನವರಿಗೆ ನಾನು ನೀನೆಂಬುದೆರಡೂ ಭ್ರಮೆಯೆನಿಸಿ ಎಲ್ಲೆಡೆಯ ಎಲ್ಲ ಜೀವಸರೋವರದೆದೆಯ ಮೇಲೂ ಶಿವಸಾಗರವು ಹರಿದು ಆವರಿಸಿ ಸರ್ವವೂ ಶಿವಮಯವಾದಂತೆನಿಸಿದೆ.
ಹೀಗೆ ಬಸವಣ್ಣನವರು ದೇಹಭಾವದ ಮತ್ತು ಚಿತ್ತವೃತ್ತಿಯ ಎಲ್ಲ ಪರಿಧಿಗಳನ್ನೂ ಭೇದಿಸಿ ಶಿವದ್ರವ್ಯದಲ್ಲಿ ಧುಮ್ಮಿಕ್ಕಿ ಕರಗಿಹೋದ ತಮ್ಮ ಕೇವಲಸ್ಥಿತಿಯ ನಿರಂಜನ ಕ್ಷಣವೊಂದನ್ನು ಕುರಿತು ಈ ವಚನದಲ್ಲಿ ನಿವೇದಿಸಿಕೊಂಡಿರುವರು.
ಭಕ್ತರ ಈ ವಿಧವಾದ ಅತಿಮಾನಸಸ್ಥಿತಿಗಳನ್ನು ಆ ಭಕ್ತರೇ ಮಾತಿಗೆ ತಂದು ಮುಂದಿಡಲು ಮುಂದುಗಾಣರೆನ್ನುತ್ತಿರುವಾಗ-ಹೊರಗಡೆ ನಿಂತ ನಿಮ್ಮಂಥ ಆಗಂತುಕರಿಗೆ –ದಟ್ಟೈಸಿದ ಕಗ್ಗತ್ತಲಲ್ಲಿ ಮುಸುಕಿದ ನೀರವದಲ್ಲಿ ಎಲ್ಲವೂ ಅಗೋಚರ ಅವಿದಿತವೆನಿಸುವುದು ಸಹಜ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.