Hindi Translationलिंगार्चन करनेवाले सभी महिमावान
परिचय के कारण भीतर आसीन हैं ।
मैं बाहर का हूँ, देव
संभालो कहता हुआ दूर खडा हूँ
कूडलसंगमदेव का तव नाम लेनेवाला
अनामिक हूँ मैं॥
Translated by: Banakara K Gowdappa
English Translation All the great ones who worship Liṅga,
Becoming as if familiar, come in:
I'm an outsider, Lord!
I keep away, saying, Beware, Beware!
O Kūḍala Saṅgama Lord, I am
A nameless one to take Thy name!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationలింగార్చన సేయు మహాత్ములుందరూ చనువుతో లోనుండిరి
దేవా! నేను వెలివాడను! సంభోళి సంభోళియంచు
దూరదూరముగనే యుంటినయ్యా నేను
నీ పేరును పట్టుకొన్న అనామికుడ నయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಐಕ್ಯನ ಐಕ್ಯಸ್ಥಲವಿಷಯ -
ಶಿವನಾಮ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನತಮ್ಮ (ಮಹಾ) ಮನೆಗೆ ಬಂದವರು ಬಿಟ್ಟ ಎಕ್ಕಡಗಳನ್ನು ಕಾಯ್ದುಕೊಂಡು ಬಸವಣ್ಣನವರು ತಮ್ಮ ದಾಸೋಹಂ ತತ್ತ್ವಕ್ಕೆ ಅನುಸಾರವಾಗಿ ಕೈಂಕರ್ಯದಿಂದ ಅಸ್ಪೃಶ್ಯರಂತೆ ಹೊರಗೆ ನಿಂತಿದ್ದಾರೆ. ಒಳಗಡೆ ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯ ಮುಂತಾದವರ ಸಂತತಿಯ ಶರಣರು ಲಿಂಗಾರ್ಚನೆಯಲ್ಲಿ ಮಗ್ನರಾಗಿದ್ದಾರೆ. ಅವರೆಲ್ಲ ಮಹಿಮಾನ್ವಿತರೆಂಬ ಶೈವಾಭಿಮಾನ. ತಾನೊಬ್ಬ ಯಃಕಶ್ಚಿತ್ ವ್ಯಕ್ತಿಯೆಂಬ ನಿರಹಂಭಾವ ಬಸವಣ್ಣನವರದು.
ತನ್ನ ಮನೆಯಲ್ಲಿ ತಾನೊಬ್ಬ ಅನ್ಯನಾಗಿ -ಭಕ್ತಜನ ಸಾಮಾನ್ಯರೆಲ್ಲಾ ಮಹನೀಯರಾಗಿ –ಚಾಳುಕ್ಯ ಚಕ್ರಾಧಿಪತ್ಯದಲ್ಲಿ ಒಬ್ಬ ಸಕ್ರಿಯ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಕಂಡುದು ಒಂದು “ಅಲೌಕಿಕ ದರ್ಶನ.”
ಎಲ್ಲಿಯೂ ತಾನಿಲ್ಲವಾಗಿ –ಎಲ್ಲವೂ ಶಿವಮಯವಾಗಿ ಪರಿಭಾವಿಸಿದ ಬಸವಣ್ಣನವರು ತಮ್ಮನ್ನೊಬ್ಬ “ಅನಾಮಿಕ” (ಅಂದರೆ ಹೆಸರು ಹಿಡಿದು ಕೂಗಬಾರದಷ್ಟು ನಿಕೃಷ್ಟನಾದ ಅಸ್ಪೃಶ್ಯ)ನೆಂದು ಉಗ್ಘಡಿಸಿಕೊಳ್ಳುವಲ್ಲಿರುವ ಮಾನವಗೌರವ ಪ್ರತಿಪಾದನೆಯನ್ನು ಇಂದಿನ ಮತ್ತು ಮುಂದೆ ಬರಲಿರುವ ಪ್ರಜಾಪ್ರಭುತ್ವದ ಜನಾಂಗಗಳು ಗುರುತಿಸಿಕೊಳ್ಳಬೇಕು. ಪ್ರಜಾಪ್ರಭುತ್ವವೆಂದರೆ ಒಬ್ಬ ಪ್ರಜೆಯು ಇನ್ನೊಬ್ಬ ಪ್ರಜೆಯ ಮೇಲೆ ಮಾಡುವ ಪ್ರಭುತ್ವವಲ್ಲ –ಒಬ್ಬ ಪ್ರಜೆಗೆ ಇನ್ನೊಬ್ಬ ಪ್ರಜೆ ತೋರುವ ಸೇವೆಯ ಮನೋಭಾವ.
ಆತ್ಮನಿರಾಕರಣದಲ್ಲೇ ಅನುಭವಿಸಿದ ಆತ್ಮಾನುಭೂತಿಯಿಂದ ಬಸವಣ್ಣನವರು ಶಿವಾನುಭಾವಕ್ಕೆ ಹೊಸ ಆಯಾಮವೊಂದನ್ನು ಸಂಪಾದಿಸಿಕೊಟ್ಟರು.
ಅಹಂಕಾರದ ಹಜ್ಜೆಯೊತ್ತಲಾರದ ಅತೀತದಲ್ಲಲ್ಲವೇ ಶಿವನಿರುವುದು ?!
ವಿ : ಅಸ್ಪೃಶ್ಯನೊಬ್ಬನು ಶಿಷ್ಟರ ಕೇರಿಗಳಲ್ಲಿ ನಡೆಯುವಾಗ –ತನ್ನನ್ನು ಮುಟ್ಟಿಸಿಕೊಂಡು ಮೈಲಿಗೆಯಾಗದಿರುವಂತೆ ಎಚ್ಚರಿಸಲೋಸುಗ ಉಚ್ಚರಿಸಬೇಕಿದ್ದ ಒಂದು ಆರ್ತನಾದ “ಸಂಬೋಳಿ.”
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.