Index   ವಚನ - 58    Search  
 
ತುಪ್ಪ ಬೋನವನುಂಡು, ನಚ್ಚುಮಚ್ಚಿನ ಮಾತ ನುಡಿದು, ರಚ್ಚೆಯಲ್ಲಿ ಕುಳಿತು ಇಷ್ಟಲಿಂಗವನಪ್ಪಿದವರ, ನಿತ್ಯಜ್ಞಾನಿಗಳೆಂದಡೆ ಪ್ರತ್ಯಕ್ಷವಾಗಿ ಸುರಿಯವೆ ಬಾಯಲ್ಲಿ ಬಾಲಹುಳು? ನಿತ್ಯರ ಕಂಡು ನಿಂದಿಸಿ ವಂದಿಸಿದಡೆ. ಪ್ರತ್ಯಕ್ಷವಾಗಿ ಪರಶಿವನ ಶರಣರು ಹೊಟ್ಟೆಯ ಸೀಳದೆ ಮಾಣ್ಬರೆ? ಅಮುಗೇಶ್ವರಲಿಂಗವನರಿಯದೆ ಬರಿಯ ಮಾತಿನಲ್ಲಿ ಅರಿವು ಸಂಬಂಧಿಗಳೆಂದಡೆ, ನೀವು ಸಾಕ್ಷಿಯಾಗಿ ಮಾರಿಗೆ ಹೊಯಿದ ಕೋಣನ ಕೊರಳ ಕೊಯಿದಂತೆ ಕೊಯ್ವರಯ್ಯಾ.