Index   ವಚನ - 57    Search  
 
ಜ್ಞಾನವೆಂಬುದು ಬೀದಿಯ ಪಸರವೆ? ಬೊಕ್ಕಣಕ್ಕೆ ತುಂಬುವ ಹುರುಳಿಯೆ? ಚೀಲದೊಳಗಣ ಜೀರಿಗೆಯೆ? ಗಾಣದೊಳಗಣ ಹಿಂಡಿಯೆ? ಜ್ಞಾನವೆಂಬುದ ಎಲ್ಲರೊಡನೆ ಬೀರದಿರಬೇಕು. ಗೆಲ್ಲ ಸೋಲಿನ ಮಾತು ಬಂದಡೆ ಗೆಲ್ಲವ ನುಡಿಯದಿರಬೇಕು ಅಮುಗೇಶ್ವರಲಿಂಗವೆಂಬೆನು.