Index   ವಚನ - 62    Search  
 
ದೇಹವಿಲ್ಲದೆ ಸುಳಿಯಬಲ್ಲಡೆ ಲಿಂಗೈಕ್ಯನೆಂಬೆನು. ಭಾವವಿಲ್ಲದೆ ಭ್ರಮಿತನಾಗಬಲ್ಲಡೆ ನಿರ್ಲೇಪಿಯೆಂಬೆನು. ಬಂದ ಬಂದ ಭೇದವನರಿದು ಲಿಂಗಾರ್ಪಿತವ ಮಾಡಬಲ್ಲಡೆ ಲಿಂಗೈಕ್ಯನೆಂಬೆನು ಅಮುಗೇಶ್ವರಲಿಂಗವನರಿದ ಆರೂಢನೆಂಬೆನು.